‘ಓ ಮುದ್ದು ಮನಸೆ’ ಧಾರಾವಾಹಿಗೆ ಅಂತ್ಯ ಹಾಡಲು ಸುವರ್ಣ ವಾಹಿನಿ ನಿರ್ಧರಿಸಿದೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ 2018ರ ಹೊತ್ತಿಗೆ ಮುದ್ದುಲಕ್ಷ್ಮಿ ಅನ್ನುವ ಧಾರಾವಾಹಿ ಪ್ರಸಾರ ಪ್ರಾರಂಭವಾಗಿತ್ತು. ಆಗ ಈ ಧಾರಾವಾಹಿ ಸಾಕಷ್ಟು ಸದ್ದು ಮಾಡಿತ್ತು ಕೂಡಾ, ಒಂದಷ್ಟು ಸಂಚಿಕೆಗಳ ಬಳಿಕ ಮಗ್ಗುಲು ಬದಲಾಯಿಸಿದ ಧಾರಾವಾಹಿ ಮುದ್ದು ಮಣಿಗಳು ಅನ್ನೋ ಟೈಟಲ್ ಜೊತೆ ಪ್ರಸಾರವಾಗಲಾರಂಭಿಸಿತು.
ಇದಾದ ಬಳಿಕ ಕಥೆಯಲ್ಲಿ ಅನೇಕ ತಿರುವುಗಳು ಸಂಭವಿಸಿತು. ಅದ್ಭುತ ಕಥೆಯ ಕಾರಣದಿಂದ ಸಾವಿರ ಸಂಚಿಕೆಗಳನ್ನು ದಾಟಿ ಪ್ರೇಕ್ಷಕರ ಮನಗೆದ್ದಿತ್ತು. ‘ಮುದ್ದು ಮಣಿಗಳು’ ಧಾರಾವಾಹಿಯಲ್ಲಿ ಮುದ್ದುಲಕ್ಷ್ಮಿಯ ಪುನರ್ಜನ್ಮ ಜಾಹ್ನವಿಯ ಆಗಮನವೂ ಆಗಿತ್ತು.
ಕೆಲ ತಿಂಗಳ ಹಿಂದಷ್ಟೇ ಮುದ್ದು ಮಣಿಗಳು ಧಾರಾವಾಹಿ ‘ಓ ಮುದ್ದುಮನಸೆ’ ಹೆಸರಿನಿಂದ ಪ್ರಸಾರ ಕಂಡಿತು.
ಇದೀಗ ವಿಷಯ ಎನ್ನಪ್ಪ ಅಂದ್ರೆ ‘ಓ ಮುದ್ದುಮನಸೆ’ ಧಾರಾವಾಹಿಗೆ ಅಂತ್ಯ ಹಾಡಲು ಸುವರ್ಣ ವಾಹಿನಿ ನಿರ್ಧರಿಸಿದೆ. ಅದರಂತೆ ಆಗಸ್ಟ್ 26 ರಂದು ‘ಓ ಮುದ್ದುಮನಸೆ’ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಈಗಾಗಲೇ ಧಾರಾವಾಹಿ ತಂಡ ಕೊನೆಯ ಎಪಿಸೋಡ್ ಶೂಟಿಂಗ್ ಮುಗಿಸಿದೆ ಅನ್ನುವ ಸುದ್ದಿಗಳು ಬಂದಿದೆ.
Discussion about this post