ಮಂಗಳೂರು : ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರು ( nissan terrano fire ) ಸುಟ್ಟು ಭಸ್ಮವಾದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಜೇನ್ ಕಲ್ ಎಂಬಲ್ಲಿ ಈ ಘಟನೆ ನಡೆದಿದ್ದು. ಅದೃಷ್ಟ ಅನ್ನುವಂತೆ ಕಾರಿನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ.
ಮಂಗಳೂರಿನ ಜೋಕಟ್ಟೆ ನಿವಾಸಿ ಆತೀಫ್ ಪತ್ನಿ ಹಾಗೂ ಮಕ್ಕಳೊಂದಿಗೆ ನಿಸ್ಸಾನ್ ಟೆರೆನ್ನೋ ( nissan terrano fire ) ಕಾರಿನಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಘಾಟಿ ಅಣ್ಣಪ್ಪ ಸ್ವಾಮಿ ದೇವಸ್ಥಾನ ಸಮೀಪ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಕಾರು ನಿಲ್ಲಿಸಿದ್ದ ಆತೀಫ್, ಪತ್ನಿ ಮತ್ತು ಮಕ್ಕಳನ್ನು ಕಾರಿನಿಂದ ಇಳಿಸಿದ್ದಾರೆ. ಕಾರಿನಲ್ಲಿ 3 ತಿಂಗಳ ಮತ್ತು 8 ವರ್ಷದ ಮಕ್ಕಳಿದ್ದರು. ಕಾರಿನಿಂದ ಎಲ್ಲರೂ ಇಳಿದ ಬೆನ್ನಲ್ಲೇ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದೆ. ಸಿಕ್ಕಾಪಟ್ಟೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದ ಬೆಂಕಿಯ ಕೆನ್ನಾಲೆಗೆ ಅಬ್ಬರಿಸಿದೆ.
ಇದನ್ನೂ ಓದಿ : ಬೈತಡ್ಕ ಕಾರು ಅಪಘಾತ ಪ್ರಕರಣ : ಎರಡು ಮೃತದೇಹಗಳು ಪತ್ತೆ ಹಿನ್ನಲೆ ಕಾರ್ಯಾಚರಣೆ ಅಂತ್ಯಗೊಳಿಸಿದ ರಕ್ಷಣಾ ತಂಡ
ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಮೂರು ಮೊಬೈಲ್ 17000 ರೂ ನಗದು ಮತ್ತು ಬಟ್ಟೆಗಳಿದ್ದ ಲಗೇಜು ಸುಟ್ಟು ಭಸ್ಮವಾಗಿದೆ.
ಹರ್ಷ ಹಂತಕರಿಗೆ ರಾಜಾಥಿತ್ಯ : ಪರಪ್ಪನ ಆಗ್ರಹಾರಕ್ಕೆ ದಿಢೀರ್ ದೌಡಾಯಿಸಿದ ಅರಗ ಜ್ಞಾನೇಂದ್ರ
ಪರಪ್ಪನ ಆಗ್ರಹಾರದಲ್ಲಿರುವ ಖೈದಿಗಳು ಬಿಂದಾಸ್ ಆಗಿದ್ದಾರೆ. ಆರೋಪಿಗಳು, ಅಪರಾಧಿಗಳ ಜೊತೆಗೆ ಕೈ ಜೋಡಿಸಿರುವ ಜೈಲು ಸಿಬ್ಬಂದಿ ಅಕ್ರಮ ಎಸಗುತ್ತಿದ್ದಾರೆ ಅನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ . ಆದರೆ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಕೂಡಾ ಜೈಲಿನಲ್ಲಿ ಸಂಭ್ರಮಿಸಿರುವ ವಿಷಯ ಬಿಜೆಪಿ ಸರ್ಕಾರದ ಬುಡಕ್ಕೆ ಬಿಸಿ ಮುಟ್ಟಿಸಿದೆ
ಬೆಂಗಳೂರು : ಹಿಂದೂ ಕಾರ್ಯಕರ್ತ ಶಿವಮೊಗ್ಗ ಹರ್ಷ ( shivamogga harsha ) ಕೊಲೆ ಪ್ರಕರಣದ ಆರೋಪಿಗಳು ಮೊಬೈಲ್ ಬಳಕೆ ಮಾಡಿ ಕುಟುಂಬಸ್ಥರೊಂದಿಗೆ ಮಾತನಾಡಿರುವ ವಿಚಾರ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಈ ಬೆಳವಣಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ( Araga Jnanendra ) ಅವರ ದಕ್ಷತೆಯನ್ನೇ ಪ್ರಶ್ನೆ ಮಾಡಿತ್ತು. ಗೃಹ ಸಚಿವರು ತಮ್ಮ ಇಲಾಖೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ರೆ ಹೀಗೆ ನಡೆಯಲು ಸಾಧ್ಯವೇ ಅನ್ನುವ ಪ್ರಶ್ನೆ ಎದ್ದಿತ್ತು. ಅಷ್ಟು ಮಾತ್ರವಲ್ಲದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧವೇ ಅಸಮಾಧಾನವನ್ನೂ ಹೊರ ಹಾಕಿದ್ದರು. ಚುನಾವಣೆ ಬಂದಾಗ ದುಡಿಯಲು ನಾವು ಬೇಕು, ಗೆದ್ದ ಮೇಲೆ ನಮಗೆ ಇಷ್ಟೇ ಬೆಲೆ ಅನ್ನುವ ನೋವು ಕೂಡಾ ಇತ್ತು.
ಚುನಾವಣೆಯ ಹೊಸ್ತಿಲಲ್ಲಿ ಈ ಆಕ್ರೋಶ ಸಹಜವಾಗಿಯೇ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಈ ನಡುವೆ ಹರ್ಷನ ಅಕ್ಕನ ಜೊತೆ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ ಅನ್ನುವ ಎಡಿಟೆಡ್ ವಿಡಿಯೋ ಹರಿದಾಡಿ ಬಿಜೆಪಿ ಪಕ್ಷವೂ ಮುಜುಗರಕ್ಕೆ ಗುರಿಯಾಗಿತ್ತು. ( ಆದರೆ ಆ ಪೂರ್ತಿ ವಿಡಿಯೋದಲ್ಲಿ ಗೃಹ ಸಚಿವರು ಸರಿಯಾಗಿಯೇ, ಗೌರವಯುತವಾಗಿ ಹರ್ಷನ ಅಕ್ಕನನ್ನು ನಡೆಸಿಕೊಂಡಿದ್ದಾರೆ. ತಮ್ಮ ಇತಿಮಿತಿಯನ್ನು ಕೈಗೊಂಡ ಹಾಗೂ ಕೈಗೊಳ್ಳಬಹುದಾದ ಕ್ರಮಗಳನ್ನು ತಾಳ್ಮೆಯಿಂದಲೇ ಗೃಹ ಸಚಿವರು ವಿವರಿಸಿದ್ದರು )
ಈ ನಡುವೆ ಮಂಗಳವಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ಕೊಟ್ಟಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಜೈಲು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ. ಹರ್ಷನನ್ನು ಕೊಂದ ಕೊಲೆ ಆರೋಪಿಗಳು ಮೊಬೈಲ್ ಬಳಕೆ ಮಾಡಿದ ಹಿನ್ನಲೆಯಲ್ಲಿ ತಾವೇ ವಸ್ತು ಸ್ಥಿತಿ ಅರಿಯಲು ಕೇಂದ್ರ ಕಾರಾಗೃಹಕ್ಕೆ ಸಚಿವರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಆರೋಪಿಗಳ ಬ್ಯಾರೆಕ್ ಪರಿಶೀಲನೆ ನಡೆಸಿದ ಅವರು, ಮೊಬೈಲ್ ಸಿಕ್ಕಿದ್ದು ಹೇಗೆ ಎಂದು ಆರೋಪಿಗಳನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಹೈ ಸೆಕ್ಯೂರಿಟಿ ಬ್ಯಾರಕ್ ಪರಿಶೀಲನೆ ನಡೆಸಿದ ಗೃಹ ಸಚಿವರು, ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳು ಜೈಲಿನೊಳಗೆ ಹೇಗೆ ಬರುತ್ತದೆ ಅನ್ನುವ ಕುರಿತು ತಪಾಸಣೆಯನ್ನೂ ನಡೆಸಿದರು.
ಹಾಗಾದ್ರೆ ಗೃಹ ಸಚಿವರ ಈ ದಿಢೀರ್ ಭೇಟಿಗೆ ಕಾರಣ ಏನು ಅನ್ನುವ ಪ್ರಶ್ನೆ ಎದ್ದಿದೆ. ಹರ್ಷನ ಕೊಲೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದೀಗ ಕೊಲೆ ಆರೋಪಿಗಳ ಜೊತೆಗೆ ಜೈಲು ಸಿಬ್ಬಂದಿ ಕೈ ಜೋಡಿಸಿರುವುದು ದೊಡ್ಡ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಹರ್ಷನ ಅಕ್ಕನ ವಿಚಾರ ಕೂಡಾ ವೈರಲ್ ಆಗಿದೆ. ಈ ಎಲ್ಲಾ ಘಟನೆಗಳ ಹಿನ್ನಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಗೃಹ ಸಚಿವರಿಗೆ ಸೂಚನೆ ಬಂದಿದೆ ಅನ್ನಲಾಗಿದೆ. ಜೊತೆಗೆ ಮುಖ್ಯಮಂತ್ರಿಗಲು ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು..
Discussion about this post