ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರಿಗೆ ಇಂದು ಸೀಮಂತ ಕಾರ್ಯ ನೆರವೇರಿದೆ. ನಗರ ಖಾಸಗಿ ಕನ್ವೆನ್ಷನ್ ಹಾಲ್ ನಲ್ಲಿ ಅದ್ಧೂರಿ ಕಾರ್ಯಕ್ರಮ ನೆರವೇರಿದೆ.
ದೇವೇಗೌಡ, ಚೆನ್ನಮ್ಮ, ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಇಡೀ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಜೊತೆಗೆ ಅನೇಕ ಗಣ್ಯರು ರೇವತಿ ಅವರಿಗೆ ಶುಭ ಹಾರೈಸಿದ್ರು.
ಕಳೆದ ಕೆಲ ವರ್ಷಗಳಿಂದ ಸಿನಿಮಾ ಜೊತೆಗೆ ರಾಜಕೀಯದಲ್ಲೂ ನಿಖಿಲ್ ಸಕ್ರಿಯರಾಗಿದ್ದು, ಪ್ರಸ್ತುತ ‘ರೈಡರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸೀಮಂತ ಸಮಾರಂಭದಲ್ಲಿ ಸಚಿವ ಮುನಿರತ್ನ, ವಿಧಾನ ಪರಿಷತ್ನ ಮಾಜಿ ಸದಸ್ಯ ಟಿ.ಎ.ಶರವಣ ಮತ್ತಿತರರು ಭಾಗವಹಿಸಿದ್ದರು. ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಇರುವ ಅವರ ಫಾರ್ಮ್ ಹೌಸ್ನಲ್ಲಿ 2020ರ ಏಪ್ರಿಲ್ 17ರಂದು ನಿಖಿಲ್ ಹಾಗೂ ರೇವತಿ ಅವರ ಕಲ್ಯಾಣವು ನಡೆದಿತ್ತು.
Discussion about this post