ನವದೆಹಲಿ : ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು CISCE 10 ಮತ್ತು 12ನೇ ತರಗತಿ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ. ಈ ಬಾರಿ 12ನೇ ತರಗತಿಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಆದರೆ 10ನೇ ತರಗತಿಯಲ್ಲಿ ಬಾಲಕರು ಮತ್ತು ಬಾಲಕಿಯರು ಸಮಗೈ ಸಾಧಿಸಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ಫಲಿತಾಂಶ ಪ್ರಕಟವಾಗಿರುವ ಕಾರಣ ಕಳೆದ ವರ್ಷದಂತೆಯೇ ಈ ಬಾರಿಯೂ ಮೆರಿಟ್ ಲಿಸ್ಟ್ ಅನ್ನು ಘೋಷಿಸಲಾಗಿಲ್ಲ.
ಈ ಹಿಂದೆಯೇ ಕೊರೋನಾ ಕಾರಣ ಈ ವರ್ಷ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಪರ್ಯಾಯ ಮೌಲ್ಯಮಾಪನ ನೀತಿಯ ಆಧಾರದಲ್ಲಿ ಈ ಬಾರಿ ಫಲಿತಾಂಶ ಪ್ರಕಟಗೊಂಡಿದೆ.
10ನೇ ತರಗತಿಯಲ್ಲಿ ಬಾಲಕಿಯರು ಹಾಗೂ ಬಾಲಕರ ತೇರ್ಗಡೆ ಪ್ರಮಾಣ ಶೇ 99.98ರಷ್ಟಿದ್ರೆ, 12ನೇ ತರಗತಿಯಲ್ಲಿ ಬಾಲಕಿಯರ ತೇರ್ಗಡೆ ಪ್ರಮಾಣ ಶೇ 99.86 ಇದ್ದು, ಬಾಲಕರ ತೇರ್ಗಡೆ ಪ್ರಮಾಣ ಶೇ 99.66 ಇದೆ.
Discussion about this post