ನಾನು JDS ಪಕ್ಷವನ್ನು ಕಳ್ಳರ ಪಕ್ಷ ಅಂದಿಲ್ಲ. ಯಾರಾದರೂ ನಾನು ಆ ರೀತಿ ಮಾತಾಡಿದ್ದೀನಿ ಎಂದು ಸಾಕ್ಷ್ಯ ತೋರಿಸಿದ್ರೆ ಅವರು ಏನು ಹೇಳಿದ್ರೂ ಕೇಳ್ತೀನಿ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ದ್ಯಾಪಸಂದ್ರ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಯಶ್, ಮೊದಲನೆಯದಾಗಿ ಜೆಡಿಎಸ್ ಪಕ್ಷದಲ್ಲೂ ನನಗೆ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಹಾಗಿದ್ರೆ ನಾನು ಅವರ ಪಕ್ಷಕ್ಕೆ ಪ್ರಚಾರಕ್ಕೆ ಹೋಗ್ತಿದ್ನಾ? ಈ ವಿಚಾರದಲ್ಲಿ ಯಾರೋ ಸಿಎಂ ಕುಮಾರಸ್ವಾಮಿಗೆ ಚಾಡಿ ಹೇಳಿ ಮಿಸ್ ಗೈಡ್ ಮಾಡಿರಬೇಕು. ಈಗ ಅವರು ಬ್ಯುಸಿಯಾಗಿರಬೇಕು. ಗೊಂದಲವಾಗಿರಬೇಕು ಆಗಿರಬೇಕು, ಬಿಡುವಾದಾಗ ವಿಷಯದ ಬಗ್ಗೆ ಯೋಚಿಸಲಿ ಎಂದಿದ್ದಾರೆ.
Discussion about this post