ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ NEET 2022 ಪರೀಕ್ಷೆ ವೇಳೆ ಪರೀಕ್ಷಾ ಮೇಲ್ವಿಚಾರಕರು ನಡೆದುಕೊಂಡ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ
ಭಾನುವಾರ ನಡೆದ ಮೆಡಿಕಲ್ ಪ್ರವೇಶ ಪರೀಕ್ಷೆ ( NEET 2022 ) 100ಕ್ಕೂ ಹೆಚ್ಚು ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪುಗಳನ್ನ ಬಿಚ್ಚಿಸಿ ಪರೀಕ್ಷಾ ಮೇಲ್ವಿಚಾರಕರು ಪರಿಶೀಲನೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪರೀಕ್ಷಾ ಮೇಲ್ವಿಚಾರಕರು ನಮ್ಮ ಮಕ್ಕಳನ್ನು ಅವಮಾನಿಸಿದ್ದಾರೆ ಎಂದು ಇದೀಗ ವಿದ್ಯಾರ್ಥಿನಿಯೊಬ್ಬರ ತಂದೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳನ್ನ ಮೆಟಲ್ ಡೆಟೆಕ್ಟರ್ನಲ್ಲಿ ಮೂಲಕ ಬಿಡುವಾಗ ಅಲರಾಂ ಬಂದಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳ ಒಳ ಉಡುಪುನ್ನೂ ಬಿಡದೆ ಪರೀಕ್ಷೆ ಮಾಡಲಾಗಿದೆ. ಕೆಲವು ವಿದ್ಯಾರ್ಥಿನಿಯರ ಬ್ರಾ ಹಾಗೂ ಅಂಡರ್ವೇರ್ ಬಿಚ್ಚಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅವಮಾನ ಎಸಗಲಾಗಿದೆ. NEET ಪರೀಕ್ಷೆಯ ಡ್ರೆಸ್ಕೋಡ್ ಪ್ರಕಾರವೇ ಬಂದರೂ ಪರೀಕ್ಷಾ ಕೊಠಡಿ ಪ್ರವೇಶಿಸಲು ಬಿಡದೆ ಅವಮಾನ ಮಾಡಲಾಗಿದೆ. ಬಿಚ್ಚಿಸಿದ ಬಟ್ಟೆಗಳನ್ನ ಸಾಮೂಹಿಕವಾಗಿ ಸ್ಟೋರ್ ರೂಮಿನಲ್ಲಿ ಇಡಲಾಗಿದೆ ಎಂದು ದೂರಲಾಗಿದೆ. ಈ ಅವಮಾನದಿಂದ ಪರೀಕ್ಷೆಯನ್ನ ಬರೆಯಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ : zameer ahmed khan : ವಿಚಾರಿಸಬೇಕಿದೆ ಬನ್ನಿ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಮೀರ್’ಗೆ ಎಸಿಬಿ ನೋಟಿಸ್
ಈ ಸಂಬಂಧ ಡಿವೈಎಸ್ಪಿ ಮಟ್ಟದ ಅಧಿಕಾರಿಗೆ ಪೋಷಕರು ದೂರು ಸಲ್ಲಿಸಿದ್ದು, ನನ್ನ ಮಗಳು ಎಂದಿಗೂ ನೀಟ್ ಪರೀಕ್ಷೆ ಬರೆಯಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಹಿಜಾಬ್ ಹಾಕಿಕೊಂಡು ಬಂದಿರುವ ವಿದ್ಯಾರ್ಥಿನಿಯನ್ನೂ ಪರೀಕ್ಷಾ ಕೊಠಡಿಯೊಳಗೆ ಬಿಟ್ಟಿಲ್ಲವಂತೆ. ಹಿಜಾಬ್ ತೆಗೆದ ನಂತರವೇ ಆಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಹಾಗೇ ನೋಡಿದರೆ ಪರೀಕ್ಷಾ ಸಂದರ್ಭದ ಡ್ರೆಸ್ ಕೋಡ್ ವಿವಾದ ಕೇರಳದಲ್ಲಿ ಹೊಸದೇನಲ್ಲ. 2017ರಲ್ಲಿ ಕಣ್ಣೂರಿನಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. CBSE ಪರೀಕ್ಷೆ ವೇಳೆಯೂ ಇದೇ ರೀತಿಯ ಘಟನೆ ನಡೆದಿತ್ತು.
ಉಚ್ಚೆ ಹೊಯ್ಯುವ ವಿಚಾರಕ್ಕೆ ಬಾರ್ ನಲ್ಲಿ ಕಿತ್ತಾಡಿಕೊಂಡ ಎರಡು ರೌಡಿ ಗ್ಯಾಂಗ್
ಮಚ್ಚು ಹಿಡಿದವರಿಗೆ ಕಿತ್ತಾಡಲು ಕಾರಣಗಳೇ ಬೇಕಿಲ್ಲ. ( bengaluru rowdies ) ಅದರಲ್ಲೂ ಖಾಕಿ ಭಯವಿಲ್ಲದೆ ಮರೆಯುತ್ತಿರುವ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ
ಬೆಂಗಳೂರು : ಬಾರ್ ಒಂದರ ಶೌಚಾಲಯದಲ್ಲಿ ಮೂತ್ರ ಹೊಯ್ಯುವಾಗ ಇಬ್ಬರು ರೌಡಿಗಳ ( bengaluru rowdies ) ನಡುವೆ ಪ್ರಾರಂಭವಾದ ಜಗಳ ಅತಿರೇಕಕ್ಕೆ ಹೋದ ಘಟನೆ ನಗರದ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರಸ್ಪರ ಬಿಯಲ್ ಬಾಟಲಿಯಲ್ಲಿ ಹೊಡೆದಾಡಿಕೊಂಡ ರೌಡಿಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ( 25 ) ರಾಘವೇಂದ್ರ ತನ್ನ ಸ್ನೇಹಿತರಾದ ಆಕಾಶ್ ಮತ್ತು ನವೀನ್ ಜೊತೆಗೆ ಸೆವೆನ್ ಹಿಲ್ಸ್ ಬಾರ್ ಗೆ ತೆರಳಿದ್ದರು. ಇದೇ ಬಾರ್ ಗೆ ಶ್ರೀರಾಮಪುರ ಠಾಣೆಯ ರೌಡಿ ಶೀಟರ್ ಯಶವಂತ (24) ಕೂಡಾ ಬಂದಿದ್ದ.
ರಾತ್ರಿ12.15ರ ಸುಮಾರಿಗೆ ರಾಘವೇಂದ್ರ ಮೂತ್ರ ವಿಸರ್ಜನೆ ಸಲುವಾಗಿ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಇದ್ದ ಮತ್ತೊಬ್ಬ ರೌಡಿ ಶೀಟರ್ ಯಶವಂತ್, ನನ್ನ ಯಾಕೆ ಗುರಾಯಿಸ್ತೀಯಾ ಎಂದು ಕಿರಿಕ್ ತೆಗೆದಿದ್ದಾನೆ. ಅಷ್ಟಕ್ಕೆ ಶುರುವಾದ ಜಗಳ ಮಾತಿಗೆ ಮಾತು ಬೆಳೆದು ಹೊಡೆದಾಟ ತನಕ ಬಂದಿದೆ. ಈ ವೇಳೆ ಯಶವಂತ್ ಬಿಯರ್ ಬಾಟಲಿಯಿಂದ ರಾಘವೇಂದ್ರನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಯಶವಂತ್ ಸಹಚರರು ರಾಘವೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ರಾಘವೇಂದ್ರ ಮತ್ತು ಆತನ ಸಹಚರರು ಯಶವಂತ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಹೀಗೆ ಎರಡು ಗುಂಪುಗಳ ಕೆಲ ಕಾಲ ಬಾರ್ ನಲ್ಲಿ ಪ್ರದರ್ಶನ ತೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಗೊಂಡ ರೌಡಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ 5 ಮಂದಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
Discussion about this post