ಅದಾನಿ ಗ್ರೂಪ್ ನಡೆಸಿದ ಈ ಕಾರ್ಯಾಚರಣೆ ಬಗ್ಗೆ NDTV ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ
ನವದೆಹಲಿ : ಅಂಬಾನಿಯವರ ರಿಲಯನ್ಲ್ ಗ್ರೂಪ್ ಗೆ ಪೈಪೋಟಿ ನೀಡುತ್ತಿರುವ ಅದಾನಿ ಗ್ರೂಪ್ ಇದೀಗ ಮಾಧ್ಯಮ ಲೋಕಕ್ಕೆ ಕಾಲಿಟ್ಟಿದೆ. ಈ ಸಂಬಂಧ ಈಗಾಗಲೇ ಹಿರಿಯ ಪತ್ರಕರ್ತರನ್ನು Adani Media Ventures Ltd (AMVL) ಸೇರಿಸಿಕೊಳ್ಳಲಾಗಿದೆ. ( NDTV)
ಮುಂದುವರಿದ ಭಾಗವಾಗಿ NDTV ಖರೀದಿಗೆ ಆಸಕ್ತಿ ತೋರಿರುವ ಅದಾನಿ ಗ್ರೂಪ್, ಈಗಾಗಲೇ ಶೇ 30ರಷ್ಟು ಪಾಲು ವಶಪಡಿಸಿಕೊಂಡಿದೆ.ಇನ್ನುಳಿದಿರುವ ಶೇ 26ರಷ್ಟು ಷೇರುಗಳನ್ನು ಮುಕ್ತಮಾರುಕಟ್ಟೆಯಿಂದ ಖರೀದಿಸಲು ಸಂಸ್ಥೆ ಮುಂದೆ ಬಂದಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಶೇ 56ರಷ್ಟು ಷೇರುಗಳು ಗೌತಮ್ ಅದಾನಿ ಪಾಲಾಗಲಿದೆ. ಇದಕ್ಕಾಗಿ ಅಂದಾಜು 493 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗಬಹುದು.
ಇದನ್ನೂ ಓದಿ : jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ
ಈ ಹಿಂದೆ ರಿಲಯನ್ಸ್ ಒಡೆತನದ ಕಂಪನಿಯೊಂದು ಎನ್ಡಿ ಟಿವಿಗೆ 250 ಕೋಟಿ ರೂಪಾಯಿ ಸಾಲ ನೀಡಿತ್ತು. NDTV ಖರೀದಿಸುವ ನಿಟ್ಟಿನಲ್ಲಿ ಮೊದಲಿಗೆ ಸಾಲ ಕೊಟ್ಟ ಕಂಪನಿಯನ್ನು ಅದಾನಿ ಸಮೂಹ ಖರೀದಿಸಿದೆ. ಬಳಿಕ NDTVಗೆ ನೀಡಿದ ಸಾಲದ ಮೊತ್ತವನ್ನು ಷೇರಾಗಿ ಪರಿವರ್ತಿಸಲಾಗಿದೆ.
ಆದರೆ ಅದಾನಿ ಗ್ರೂಪ್ ನಡೆಯನ್ನು NDTV ಆಡಳಿತ ಮಂಡಳಿ ಒಪ್ಪಲು ಸಿದ್ದವಿಲ್ಲ. ತನ್ನ ಅನುಮತಿ ಪಡೆಯದೇ ಸಾಲವನ್ನು ಷೇರಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದೆ.
Discussion about this post