Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Namma Metro ರೈಲಿನ ಸಿಸಿ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿದ್ರೆ ಏನಾಗುತ್ತದೆ

Two boys in soup for masking CCTV camera in Metro train

Radhakrishna Anegundi by Radhakrishna Anegundi
17-11-23, 10 : 59 am
in ಟಾಪ್ ನ್ಯೂಸ್
namma metro two-boys-in-soup-for-masking-cctv-camera

Image Credit to Original Source

Share on FacebookShare on TwitterWhatsAppTelegram

Namma Metro ಸಿಸಿ ಕ್ಯಾಮಾರಗೆ ಸ್ಟಿಕ್ಟರ್ ಅಂಟಿಸಿದವರ ಪಾಡು ಹೇಳತೀರದು

ಮೆಟ್ರೋ ರೈಲ್ ( Namma Metro ) ಅನ್ನು ಸಂಚಾರಕ್ಕೆ ಬಳಸೋ ಬದಲು ಆಟಕ್ಕೆಂದು ಬಳಸಿ ಕೀಟಲೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಮಾತ್ರವಲ್ಲದೆ ಸಾರ್ವಜನಿಕ ಸೊತ್ತುಗಳನ್ನು ಹಾನಿ ಮಾಡಿದ್ರೆ ಮುಂದೈತೆ ಮಾರಿ ಹಬ್ಬ ಅನ್ನೋದನ್ನು ಹೇಳಿದೆ.

ಮೆಟ್ರೋ Namma Metro ರೈಲಿನ ಒಳಗಡೆ ಇರುವ ಸಿಸಿ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿ ವಿಡಿಯೋ ಶೂಟ್ ಆಗದಂತೆ ಅಡ್ಡಿ ಮಾಡಿದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ : PDO ಶೃತಿ ಗೌಡ ಪ್ರಕರಣ :  ಗುಂಡಿಕ್ಕಿ ಕೊಲೆಗೈದ ರಾಜೇಶ್ ಗೆ ಜೀವಾವಧಿ ಶಿಕ್ಷೆ

ನವೆಂಬರ್ 9 ರಂದು ಒಂದು ಕೋಚ್ ನಲ್ಲಿರುವ ಅಲರ್ಟ್ ಕ್ಯಾಮಾರದಲ್ಲಿ ವಿಡಿಯೋ ಚಿತ್ರೀಕರಣವಾಗದಿರುವುದು ಕ್ಯಾಬಿನ್ ನಿರ್ವಾಹಕರ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಮುಂದಿನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿರೋದು ಗೊತ್ತಾಗಿದೆ. ತಕ್ಷಣ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ.

ಹೀಗೆ ಕೀಟಲೆ ಮಾಡಿದವರಾರು ಎಂದು ಪರಿಶೀಲನೆ ನಡೆಸಲು ಕೋಚ್ ನಲ್ಲಿರುವ ಇತರ ಕ್ಯಾಮಾರಗಳ ಫೂಟೇಜ್ ಜಾಲಾಡಿದಾಗ ವಿದ್ಯಾರ್ಥಿಗಳು ಸ್ಟಿಕ್ಕರ್ ಅಂಟಿಸೋದು ಬೆಳಕಿಗೆ ಬಂದಿದೆ. ಹೀಗಾಗಿ ಈ ಕುರಿತಂತೆ ಮಾಹಿತಿಯನ್ನು BMRCL ಭದ್ರತಾ ತಂಡಕ್ಕೆ ರವಾನಿಸಲಾಗಿದೆ.

Namma_Metro
Namma Metro ರೈಲಿನ ಸಿಸಿ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿದ್ರೆ ಏನಾಗುತ್ತದೆ 1

ಈ ಬಗ್ಗೆ BMRCL ಭದ್ರತಾ ಸಿಬ್ಬಂದಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸಿ ಸಮವಸ್ತ್ರದ ಆಧಾರದ ಮೇಲೆ ಶಾಲೆಯನ್ನು ಗುರುತಿಸಿದ್ದಾರೆ. ಜೊತೆಗೆ ಇದೇ ವಿದ್ಯಾರ್ಥಿಗಳು ಎಲ್ಲಿ ರೈಲು ಹತ್ತಿದ್ದಾರೆ, ಎಲ್ಲಿ ಇಳಿದಿದ್ದಾರೆ ಅನ್ನುವುದನ್ನೂ ಪರಿಶೀಲನೆ ನಡೆಸಿದ್ದಾರೆ.

ಅದರಂತೆ ಮರು ದಿನ ಬೆಳಗ್ಗೆ ವಿದ್ಯಾರ್ಥಿಯೊಬ್ಬ ಜಯನಗರದಲ್ಲಿ ರೈಲು ಹತ್ತಿದಾಗ, ಆತನನ್ನು ವಶಕ್ಕೆ ಪಡೆದು ನಿಲ್ದಾಣದ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಈ ವೇಳೆ ವಿಚಾರಣೆ ನಡೆಸಿದಾಗ ಆತ ತಪ್ಪು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ : ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ಬಳಿಕ ಮೆಟ್ರೋ ಕಾಯ್ದೆಯಂತೆ ಸೆಕ್ಷನ್ 59ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಾಲಕನ ಮನೆಯವರಿಂದ ದಂಡ ಕಟ್ಟಿಸಿಕೊಳ್ಳಲಾಗಿದೆ. ಈ ಸಂಬಂಧ ಶಾಲೆಗೂ ಮಾಹಿತಿ ನೀಡಲಾಗಿದೆ.

ಅಂದ ಹಾಗೇ ನವೆಂಬರ್ 9 ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹಸಿರು ಮಾರ್ಗದ ರೈಲಿನಲ್ಲಿ ಕೋಣಕುಂಟೆ ಕ್ರಾಸ್ ನಿಂದ ಜಯನಗರ ಕಡೆಗೆ ರೈಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Namma_Metro
Namma Metro ರೈಲಿನ ಸಿಸಿ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿದ್ರೆ ಏನಾಗುತ್ತದೆ 2

ಮೆಟ್ರೋ ರೈಲಿನ ಪ್ರತಿಯೊಂದು ಕೋಚ್ ನಲ್ಲಿ ನಾಲ್ಕು ಸಿಸಿ ಕ್ಯಾಮಾರಗಳಿದ್ದು, ಈ ಪೈಕಿ ಬಾಗಿಲ ಬಳಿಯ ಕ್ಯಾಮಾರಗೆ ವಿದ್ಯಾರ್ಥಿ ಸ್ಟಿಕ್ಕರ್ ಅಂಟಿಸಿದ್ದ.

The duo has been booked under Section 59 of the Metro Act. The boy’s family paid a fine of Rs 500 and he was let off with a warning.

Tags: FEATUREDnamma metro
ShareTweetSendShare

Discussion about this post

Related News

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

Uttarkashi Tunnel Collapse : ಯಾವುದೇ ಕ್ಷಣದಲ್ಲಿ ಸಿಹಿ ಸುದ್ದಿ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಊಟ ಇಲ್ಲ ಅನ್ನಬೇಡಿ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಕಮಿಟಿಗೆ ಶಾಸಕರ ಸೂಚನೆ

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

Arecanut Price  : ಕ್ಯಾಂಪ್ಕೊದಲ್ಲಿ ಇಂದಿನ ಅಡಿಕೆ ದರ ಹೀಗಿದೆ  

ಪದ್ಮನಾಭನಗರದ ಬಿಜೆಪಿ ನಾಯಕ ಅಶೋಕ್ ಗೆ (R Ashok) ಪ್ರತಿಪಕ್ಷ ಸ್ಥಾನ : ಮತ್ತೆ ಎಡವಿತೇ ಬಿಜೆಪಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್