‘ಎಡೆಯೂರು ಸಿದ್ದಲಿಂಗೇಶ್ವರ’ ‘ಬೆಟ್ಟದ ಹೂ’, ‘ಜೇನುಗೂಡು’, ಪ್ರೀತಿಯ ಅಲೆಯಲ್ಲಿ ‘ಮರಳಿ ಮನಸಾಗಿದೆ’ ಹೀಗೆ ಕೆಲ ಧಾರಾವಾಹಿಗಳ ಮೂಲಕ ವೀಕ್ಷಕರ ಮನ ಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿ ಮತ್ತೊಮ್ಮೆ ಹೊಸ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದೆ.( namma lachi)
‘ನಮ್ಮ ಲಚ್ಚಿ’ ಎಂಬ ಧಾರಾವಾಹಿ ತೆರೆಗೆ ಬರಲು ಸಜ್ಜಾಗಿದ್ದು, ಈಗಾಗಲೇ ಪ್ರೋಮೋ ಕೂಡಾ ಬಿಡುಗಡೆಯಾಗಿದೆ. ಪ್ರೋಮೋ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಜೊತೆಗೆ ತಾರಾ ಬಳಗವೂ ಧಾರಾವಾಹಿಯ ಮೇಲೆ ಮತ್ತಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.(namma lachi)
‘ನಮ್ಮ ಲಚ್ಚಿ’ ಧಾರಾವಾಹಿಯ ಕಥೆಯನ್ನು ಹಾಡುಗಾರಿಕೆಯ ಮೇಲೆ ಹೆಣೆಯಲಾಗಿದೆ. ತಂದೆ ಯಾರೆಂಬುದೇ ಗೊತ್ತಿಲ್ಲದ ಮಗಳಿಗೆ ತಂದೆಯ ಗುಣವೇ ಬಂದಿದೆ. ಅಮ್ಮ ಕೂಡ ತಂದೆಯ ವಿಚಾರವನ್ನು ಮಗಳಿಗೆ ಹೇಳಿಲ್ಲ. ಹಾಡು ಎಂದರೆ ದ್ವೇಷ ಮಾಡುವ ಅಮ್ಮನ ಮುಂದೆ ಮಗಳಲ್ಲಿ ಹಾಡುವ ಟ್ಯಾಲೆಂಟ್ ಬಂದಿದೆ. ಹೀಗೆ ಕಥೆ ಮುಂದುವರಿಯುತ್ತದೆ. (namma lachi)
Discussion about this post