ಬೆತ್ತಲೆಯಾಗಿ ವಾಹನ ಚಲಾಯಿಸುತ್ತಿದ್ದ ಮೂವರು ಯುವತಿಯರನ್ನು ಪೊಲೀಸರು ಚೇಸ್ ಮಾಡಿ ಬಂಧಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಜಾಗವೊಂದರಲ್ಲಿ ಕಾರು ಅನುಮಾನಸ್ಪದವಾಗಿ ನಿಂತಿರುವುದನ್ನು ಗಮನಿಸಿ ಪೊಲೀಸರು ಕಾರಿನ ಸಮೀಪಕ್ಕೆ ಧಾವಿಸಿದ್ದಾರೆ. ಈ ವೇಳೆ ಮೂವರು ಯುವತಿಯರು ಬೆತ್ತಲಾಗಿ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುತ್ತಿದ್ದರು.
ಈ ವೇಳೆ ಪೊಲೀಸರು ಯುವತಿಯರನ್ನು ಪ್ರಶ್ನಿಸಿದ್ರೆ ಸ್ನಾನ ಮಾಡಿ ದೇಹವನ್ನು ಗಾಳಿಯಲ್ಲಿ ಒಣಗಿಸುತ್ತಿದ್ದೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮತ್ತು ಪೊಲೀಸರೊಂದಿಗೆ ವಿಚಾರಣೆಯಲ್ಲಿ ಸಹಕರಿಸದ ಹಿನ್ನಲೆಯಲ್ಲಿ ಯುವತಿಯನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಂತೆ, ತಮ್ಮ Nissan Sentra ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಮುಂದಾಗಿದ್ದಾರೆ.
ಇದೇ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆಯೂ ನಡೆದಿದೆ. ಹೀಗಾಗಿ 33 ಕಿ.ಮೀಗೂ ಹೆಚ್ಚು ದೂರ ಪೊಲೀಸರು ಚೇಸ್ ಮಾಡಿ ಕಾರು ಚಲಾಯಿಸುತ್ತಿದ್ದ ಯುವತಿಯರನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸರನ್ನು ಆಟ ಆಡಿಸಿದ ಯುವತಿಯರು ಇದೀಗ ಜೈಲು ಸೇರಿದ್ದು, ಕಾರಿನಲ್ಲಿ ಗಾಂಜಾ ಸೇರಿ ಆಮಲು ಪದಾರ್ಥಗಳು ಸಿಕ್ಕಿದೆಯಂತೆ.
Discussion about this post