ಜೀ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳ ಲಿಸ್ಟ್ ನಲ್ಲಿ ಸ್ಥಾನ ಪಡೆದಿರುವ ನಾಗಿಣಿ ಧಾರವಾಹಿಯ ತ್ರಿಶೂಲ್ ಖ್ಯಾತಿ ನಟ ನಿನಾದ್ ಹರಿತ್ಸ ಪ್ರೀತಿಸಿದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮ್ಮ ದೀರ್ಘಕಾಲದ ಗೆಳತಿ ರಮ್ಯಾರ ಜೊತೆಗೆ ನಟ ನಿನಾದ್ ಹರಿತ್ಸ ಅವರ ನಿಶ್ಚಿತಾರ್ಥ ಸಮಾರಂಭ ಇತ್ತೀಚೆಗಷ್ಟೇ ಜರುಗಿದೆ. ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಪಾಲ್ಗೊಂಡಿದ್ದು ಇವರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ.
ನಟ ನಿನಾದ್ ಹರಿತ್ಸ ಕಿರುತೆರೆ ಲೋಕದಲ್ಲಿ ಬಿಜಿಯಾಗಿದ್ರೆ ರಮ್ಯಾಗೆ ಬಣ್ಣದ ಬದುಕಿನಿಂದ ದೂರವಿದ್ದಾರೆ. ಸಿಎ ಓದಿರುವ ರಮ್ಯಾ ಅದೇ ಲೈನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನಾದ್ ಹಾಗೂ ರಮ್ಯ ಕೆಲ ವರ್ಷಗಳಿಂದ ಪರಿಚಯಸ್ಥರು. ಕಾಮನ್ ಫ್ರೆಂಡ್ ಮೂಲಕ ಆದ ಪರಿಚಯ ಸ್ನೇಹ ಬಳಿಕ ಪ್ರೀತಿಗೆ ತಿರುಗಿದೆ.
Discussion about this post