ಮಧ್ಯಪ್ರದೇಶ : ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಇದು ಒಂದು ಕಾಲದಲ್ಲಿ ಸೂಪರ್ ಹಿಟ್ ಆದ ಹಾಡು. ಈಗ್ಲೂ ಚಾಲ್ತಿಯಲ್ಲಿರುವ ಹಾಡು. ಆದರೆ ಹೀಗೆ ಮೀಸೆ ಬಿಟ್ಟ ಪೊಲೀಸ್ ಪೇದೆಯೊಬ್ಬ ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಅಂದ ಹಾಗೇ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್ ನಲ್ಲಿ. ಇಲ್ಲಿನ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕೇಶ್ ರಾಣಾ, ಕುತ್ತಿಗೆ ತನಕ ಕೂದಲು ಬಿಟ್ಟು, ಉದ್ದ ಮೀಸೆ ಬಿಟ್ಟು ಕರ್ತವ್ಯ ಹಾಜರಾಗುತ್ತಿದ್ದ. ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಸಹಿಸಲು ಸಾಧ್ಯವಿಲ್ಲ.ಕೂದಲು ಮೀಸೆಗೆ ಕತ್ತರಿ ಹಾಕು ಅಂದಿದ್ದಾರೆ.
ಆದರೆ ಇದಕ್ಕೆ ಕ್ಯಾರೆ ಅನ್ನದ ರಾಣಾ, ಮೇಲಾಧಿಕಾರಿಗಳ ಮಾತು ಉಲ್ಲಂಘಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಹೀಗಾಗಿ ಕ್ರಮಕ್ಕೆ ಮುಂದಾದ ಅಧಿಕಾರಿಗಳು ರಾಕೇಶ್ ರಾಣಾನನ್ನು ಅಮಾನತು ಮಾಡಿದ್ದಾರೆ.
ಈ ಬಗ್ಗೆ ರಾಣಾ ಕೂಡಾ ಪ್ರತಿಕ್ರಿಯೆ ನೀಡಿದ್ದು ಇದು ನನ್ನ ಆತ್ಮಗೌರವದ ಪ್ರಶ್ನೆ. ಹೀಗಾಗಿ ಯಾವುದೇ ಕಾರಣಕ್ಕೂ ಮೀಸೆ ಕತ್ತರಿಸುವುದಿಲ್ಲ ಅಂದಿದ್ದಾನೆ.
A police constable posted with Co-operative Fraud and Public Service Guarantee wing of MPolice has been suspended for growing his moustache like wing commander Abhinandan @ndtv @ndtvindia pic.twitter.com/B36BknwFey
— Anurag Dwary (@Anurag_Dwary) January 9, 2022
Discussion about this post