ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅನ್ನುವುದಾದ್ರೆ ಬೆಂಗಳೂರಿನಲ್ಲಿ ನೆಲೆಯೂರಿರುವ ಪತ್ರಕರ್ತರು ಬೀದಿಗೆ ಬರಬೇಕು -Multi speciality hospital
ಬೆಂಗಳೂರು : ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Multi speciality hospital) ಬೇಕು ಅನ್ನುವ ಕೂಗು ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಈ ಬೇಡಿಕೆ ಕುರಿತಂತೆ ಮನವಿ ಪತ್ರ ಸಲ್ಲಿಕೆಯಾಗುತ್ತಿದೆ. ಆದರೆ ಆದ್ಯಾವ ರಾಜಕಾರಣಿಗೂ, ಆದ್ಯಾವ ಮುಖ್ಯಮಂತ್ರಿಗೂ ಈ ಬಗ್ಗೆ ಆಸ್ಪತ್ರೆ ಘೋಷಿಸಲು ಸಾಧ್ಯವಾಗಿಲ್ಲ. ಈ ವರೆಗೆ ಮಂಡಿಸಲ್ಪಟ್ಟ ಬಜೆಟ್ ಗಳಲ್ಲಿ ಅದೆಷ್ಟು ಜಿಲ್ಲೆಗಳಿಗೆ ಸೂಪರ್ ಸ್ಪೆಷಾಲಿಟಿ ಘೋಷಣೆಯಾಗಿಲ್ಲ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ದಾವಣಗೆರೆ, ತುಮಕೂರು, ವಿಜಯಪುರ, ಕೋಲಾರ, ರಾಮನಗರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಭರವಸೆ ನೀಡಲಾಗಿತ್ತು. ಆದರೆ ಉತ್ತರ ಕನ್ನಡದ ಹೆಸರು ಬಂದಿರಲಿಲ್ಲ.
ಇನ್ನು ಪ್ರತೀ ಸರ್ಕಾರ ಬಂದಾಗ ಉತ್ತರ ಕನ್ನಡದ ಶಾಸಕರೊಬ್ಬರು ಮಂತ್ರಿಯಾಗುತ್ತಿದ್ದರು. ಆದರೆ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ (Multi speciality hospital) ಆಸ್ಪತ್ರೆಯೊಂದನ್ನು ಮಂಜೂರು ಮಾಡಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ವಿಶ್ವೇಶರ ಹೆಗ್ಗಡೆ ಕಾಗೇರಿ, ಆರ್ ವಿ ದೇಶಪಾಂಡೆ, ಶಿವರಾಮ್ ಹೆಬ್ಬಾರ್, ಅಸ್ನೋಟಿಕರ್ ಹೀಗೆ ಪಟ್ಟಿ ಬೆಳೆಯುತ್ತದೆ. ಹೋಗ್ಲಿ ಸೋಷಿಯಲ್ ಮಿಡಿಯಾದಲ್ಲಿ ಆಂದೋಲನ ನಡೆಸಿದ್ರು ಪ್ರಯೋಜನವಾಗಿಲ್ಲ ಅಂದ್ರೆ ಸರ್ಕಾರ ಅದೆಷ್ಟರ ಮಟ್ಟಿಗೆ ಈ ಬೇಡಿಕೆಯನ್ನು ಸೈಡಿಗೆ ಸರಿಸಿರಬೇಡ.
ಇದನ್ನೂ ಓದಿ : veerendra heggade : ಪ್ರಧಾನಿ ನರೇಂದ್ರ ಮೋದಿಗೆ ಧರ್ಮಸ್ಥಳದ ಪ್ರಸಾದ ಕೊಟ್ಟ ವೀರೇಂದ್ರ ಹೆಗ್ಗಡೆ
ಹಾಗಾದ್ರೆ ಉತ್ತರ ಕನ್ನಡಕ್ಕೆ ಆಸ್ಪತ್ರೆ ತರಿಸೋದು ಕಷ್ಟವೇ. ಖಂಡಿತಾ ಇಲ್ಲ. ತುಂಬಾ ಸುಲಭ. ಕನ್ನಡದ ದಿನ ಪತ್ರಿಕೆ ಮತ್ತು ಸುದ್ದಿ ವಾಹಿನಿಗಳ ಆಯಾ ಕಟ್ಟಿನ ಜಾಗದಲ್ಲಿ ಉತ್ತರ ಕನ್ನಡದ ಅನೇಕ ಮಂದಿ ಕೂತಿದ್ದಾರೆ. ಹಲವಾರು ಮಂದಿ ಸಂಪಾದಕರಾಗಿದ್ದಾರೆ, ಮಾಧ್ಯಮ ಮನೆಗಳ ಮಾಲೀಕರಾಗಿದ್ದಾರೆ.
ಉತ್ತರ ಕನ್ನಡದ ಪತ್ರಕರ್ತರು ಒಂದು ಪುಟ್ಟ ಸಭೆ ಮಾಡಿ ಸಿಎಂ ಮನೆ ಮುಂದೆ ಧರಣಿ ಮಾಡ್ತೀವಿ ಅನ್ನಲಿ. ನಾಳೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗದಿದ್ರೆ ಹೇಳಿ. ಉತ್ತರ ಕನ್ನಡದಿಂದ ಬಂದ ಅದೆಷ್ಟು ಪತ್ರಕರ್ತರು ಬೆಂಗಳೂರಿನಲ್ಲಿ ಇಲ್ಲ ಹೇಳಿ. ಅವರೆಲ್ಲರೂ ಜೊತೆಯಾಗಿ ಬೇಡಿಕೆ ಈಡೇರಿಕೆಗೆ, ಜನ್ಮ ನೀಡಿದ ನೆಲದ ಬೇಡಿಕೆ ಈಡೇರಿಕೆಗೆ ಧರಣಿ ಕೂರಲಿ. ಅದು ಹೇಗೆ ಆಸ್ಪತ್ರೆ ಪ್ರಾರಂಭವಾಗುವುದಿಲ್ಲ ಹೇಳಿ. ಮಠಗಳಿಗೆ ಕೊಡಲು ಸರ್ಕಾರದ ಬಳಿ ಕಾಸಿದೆ ಅಂದ ಮೇಲೆ ಆಸ್ಪತ್ರೆ ಕಟ್ಟಿಸಲು ಕಾಸಿಲ್ಲದಿರಲು ಸಾಧ್ಯವೇ.
ಇದನ್ನೂ ಓದಿ : actress indraja : ಇಂದ್ರಜಾ ಮದುವೆಗೆ ಎಷ್ಟು ಜನ ಬಂದಿದ್ದರು… ಖರ್ಚಾಗಿತ್ತು ಎಷ್ಟು ಗೊತ್ತಾ..? ವೆಚ್ಚದ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ
ಹೀಗಾಗಿ ಉತ್ತರ ಕನ್ನಡದ ಪತ್ರಕರ್ತರು ಬೀದಿಗೆ ಬಾರದ ಹೊರತು ಉತ್ತರ ಕನ್ನಡದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ನನಸಾಗಲು ಸಾಧ್ಯವೇ ಇಲ್ಲ.
Discussion about this post