ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ನಟನೆಯ ಬಹು ನಿರೀಕ್ಷಿತ ಮುಗಿಲ್ ಪೇಟೆ ಸಿನಿಮಾ ಇಂದು ತೆರೆಗೆ ಬಂದಿದೆ. ಈ ನಡುವೆ ವಿವಾದವನ್ನು ಕೂಡಾ ಮೈ ಮೇಲೆ ಎಳೆದುಕೊಂಡು ಬಂದಿರುವ ಮುಗಿಲ್ ಪೇಟೆ ಹಿಂದೂ ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಿನಿಮಾದಲ್ಲಿ ಸಾಧು ಕೋಕಿಲಾ ಹಿಂದೂ ಸನ್ಯಾಸಿಯಾಗಿ ಕಾಣಿಸಿಕೊಂಡಿದ್ದು ಅದರಲ್ಲಿ ಹಿಂದೂ ಸ್ವಾಮೀಜಿಗಳನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಜೊತೆಗ ಹಿಂದೂ ಧರ್ಮದ ರಕ್ಷಣೆಗಾಗಿ ದುಡಿಯುತ್ತಿರುವ ನಿತ್ಯಾನಂದ ಸ್ವಾಮೀಜಿಯವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಚಂದ್ರಮತಿ ಅನ್ನುವವರು ಬಂಧುಗಳೇ ದಯವಿಟ್ಟು ಹಿಂದೂಧರ್ಮ ಮತ್ತು ಸಂಪ್ರದಾಯಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಹಣಗಳಿಸುವಷ್ಟು ನಿರಭಿಮಾನಿಗಳಾಗಬೇಡಿ, ಧರ್ಮ ರಕ್ಷಿಸಿದವರನ್ನು ಧರ್ಮ ರಕ್ಷಿಸುತ್ತದೆ, ಕೊನೆಯಲ್ಲಿ ಉಳಿಯುವುದು ನೀವು ಮಾಡಿದ ಒಳ್ಳೆಯ ಕಾರ್ಯ ಮಾತ್ರ, ನೆನಪಿಡಿ ಇಂಥಹ ಪ್ರಯತ್ನಗಳಿಗೆ ತಾಳಿಕೆಯಿಲ್ಲ ಇಂಥಹ ದುಡಿಮೆಗೆ ಬೆಲೆಯಿಲ್ಲ ಅಂದಿದ್ದಾರೆ.
Discussion about this post