ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಅಧಿಕಾರಕ್ಕೆ ಬಂದ ದಿನದಿಂದ ದುಂದುವೆಚ್ಚದ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ.
ದೊಡ್ಡದೊಂದು ಹಗರಣದ ಸುಳಿಯಲ್ಲಿ ಸಿಲುಕಿದ್ದ ಕಮಲನಾಥ್ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗಿದ್ದು, ಸಿಟ್ಜರ್ಲ್ಯಾಂಡ್ ಪ್ರವಾಸಕ್ಕೆ 1.58 ಕೋಟಿ ರೂಪಾಯಿ ಖರ್ಚು ಮಾಡಿರೋದು ಬೆಳಕಿಗೆ ಬಂದಿದೆ.
ಆರ್ ಟಿಐ ಮೂಲಕ ಮಾಹಿತಿ ಬಹಿರಂಗವಾಗಿದ್ದು, ಜನವರಿ ತಿಂಗಳಲ್ಲಿ ವರ್ಲ್ಡ್ ಎಕಾನಾಮಿಕ್ ಫೋರಂ ನಲ್ಲಿ ಭಾಗವಹಿಸಲು ಸ್ವಿಟ್ಜರ್ಲ್ಯಾಂಡ್ ನ ದಾವೋಸ್ ಗೆ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್, ರಾಜ್ಯ ಮುಖ್ಯಕಾರ್ಯದರ್ಶಿ ಎಸ್ ಆರ್ ಮೊಹಂತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅಶೋಕ್ ಬರ್ನ್ವಾಲ್, ಕೈಗಾರಿಕಾ ನೀತಿ ಇಲಾಖೆ ಹಾಗೂ ಹೂಡಿಕೆ ಉತ್ತೇಜನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸುಲೇಮಾನ್ ತೆರಳಿದ್ದರು.
ಈ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳ ಪ್ರಯಾಣ ವೆಚ್ಚ, ವಸತಿ ಸೇರಿದಂತೆ ಒಟ್ಟಾರೆ 1.58 ಕೋಟಿ ರೂಪಾಯಿ ಖರ್ಚಾಗಿರುವುದು ಮಾಹಿತಿ ಹಕ್ಕು ಮೂಲಕ ಬಹಿರಂಗವಾಗಿದೆ.
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಜನರಿಗೆ ಸಾವಿರ ಅನುಕೂಲ ಮಾಡಿಕೊಡುವುದಾಗಿ ಅಧಿಕಾರಕ್ಕೆ ಬಂದ ಕಮಲನಾಥ್ ಸರ್ಕಾರ ಅದ್ಯಾಕೋ ಸರ್ಕಾರದ ಬೊಕ್ಕಸದಲ್ಲಿರುವ ಹಣವನ್ನು ಖರ್ಚು ಮಾಡುವ ರೀತಿ ನೋಡಿದ್ರೆ ಮಧ್ಯಪ್ರದೇಶಕ್ಕೆ ಸಂಕಷ್ಟ ಗ್ಯಾರಂಟಿ ಅನ್ನುವಂತಿದೆ.
Discussion about this post