ದುಬಾರಿ ಕಾರು ಪ್ರಿಯರ ಅದರಲ್ಲೂ SUVಯನ್ನು ಇಷ್ಟಪಡುವ ಭಾರತದ ಮಂದಿಗೆ ಮತ್ತೊಂದು ಹೊಸ ಕಾರು ಸಿದ್ದವಾಗಿದೆ.
ಬ್ರಿಟಿಷ್ ಮೂಲದ ಪ್ರತಿಷ್ಠಿತ ಎಂಜಿ ಮೋಟಾರ್ ಸಂಸ್ಥೆಯ ನೂತನ ಎಂಜಿ ಹೆಕ್ಟರ್ SUV ಕಾರುಗಳು ಮೇ 15ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಜೂನ್ ತಿಂಗಳಿನಿಂದ ರಸ್ತೆಗಿಳಿಯಲಿದೆ.
ಬಿಎಸ್ 6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಲಭ್ಯವಾಗಲಿದೆ. ಪೆಟ್ರೋಲ್ ಆವೃತ್ತಿಯು 160 ಬಿಎಚ್ಪಿ, ಡೀಸೆಲ್ ಆವೃತ್ತಿಯು 170 ಬಿಎಚ್ಪಿ ( Brake Horse Power)ಹೊಂದಿದೆ.
ಈ ಕಾರಿನೊಳಗೆ 10.4 ಇಂಚಿನ ಟಚ್ ಸ್ಕ್ರೀನ್, ರನ್ನಿಂಗ್ iSMART ಸಿಸ್ಟಮ್ ಹೊಂದಿದ್ದು ಇದು ಕಾರಿನ ಆ್ಯಂಡ್ರಾಯ್ಡ್ ಆಧಾರಿತ OS 4G ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಎಂಜಿ ಹೆಕ್ಟರ್ ಎಸ್ ಯುವಿ ಕಾರಿನ ಆರಂಭಿಕ ಬೆಲೆ 15ರಿಂದ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಕಾರು ಜೀಪ್ ಕಂಪಾಸ್, ಹುಂಡಾಯ್ ಟ್ಯುಕ್ಸಾನ್ ಹಾಗೂ ಟಾಟಾ ಹ್ಯಾರಿಯರ್ ಗೆ ಸ್ಪರ್ಧೆಯೊಡ್ಡುವ ಸಾಧ್ಯತೆಗಳಿದೆ.
ಇದರೊಂದಿಗೆ ಎಂಜಿ ಮೋಟಾರ್ ಸಂಸ್ಥೆ ತನ್ನ ಉಳಿದ ಮಾಡೆಲ್ ಗಳ ಪೈಕಿ MG eZS 2019ರ ನವೆಂಬರ್, MG RX5 ಅನ್ನು 2019 ಡಿಸೆಂಬರ್ ನಲ್ಲಿ, MG Baojun 510 ಅನ್ನು 2020 ಜನವರಿಯಲ್ಲಿ ಹಾಗೂ MG GS ಸರಣಿಯನ್ನು ಜೂನ್ 2020ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಒಂದೆರೆಡು ತಿಂಗಳು ಇದರಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿದೆ.
Discussion about this post