ಮೈಸೂರು : ಯೋಗ ದಿನದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸಕ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ನಡುವೆ ಪ್ರಧಾನಿಯವರು ಮೈಸೂರಿಗೆ ಬಂದರೂ, ಮೈಸೂರು ಅರಮನೆ ಆವರಣದಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಯದುವಂಶದವರನ್ನು ಭೇಟಿಯಾಗುತ್ತಿಲ್ಲ ಯಾಕೆ ಅನ್ನುವ ಪ್ರಶ್ನೆ ಎದ್ದಿತ್ತು. ಆದರೆ ಇದೀಗ ಅದಕ್ಕೆ ತೆರೆ ಬಿದ್ದಿದ್ದು, ಜೂನ್ 21 ರಂದು ಬೆಳಗ್ಗೆ 6.30ಕ್ಕೆ ಪ್ರಾರಂಭವಾಗುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನರೇಂದ್ರ ಮೋದಿಯವರು, 7.45ಕ್ಕೆ ಯೋಗ ಕಾರ್ಯಕ್ರಮ ಮುಗಿಸಿ, ಅರಮನೆ ಹಿಂಭಾಗದಲ್ಲಿರುವ ರಾಜವಂಶಸ್ಥರ ನಿವಾಸಕ್ಕೆ ತೆರಳುವ ಸಾಧ್ಯತೆಗಳಿದೆ.
ಅಲ್ಲೇ ಅವರು ಉಪಹಾರ ಸೇವಿಸಲಿದ್ದಾರೆ ಅನ್ನಲಾಗಿದ್ದು. ರಾಜಮಾತೆ ಪ್ರಮೋದಾ ದೇವಿ ಹಾಗೂ ಯದುವೀರ್ ಒಡೆಯರನ್ನು ಭೇಟಿಯಾಗಲಿದ್ದಾರೆ. ಇನ್ನು ಜೂನ್ 20 ರಂದು ಬೆಂಗಳೂರು ಕಾರ್ಯಕ್ರಮ ಮುಗಿಸಿ ಮೈಸೂರಿಗೆ ತೆರಳುವ ಪ್ರಧಾನಿಗಳು, ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ, ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆಯಲಿದ್ದಾರೆ. ಬಳಿಕ ರಾಯ್ಡಿಸನ್ ಹೋಟೆಲ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ
Discussion about this post