ಕೆಲ ದಿನಗಳಿಂದ ರುಸ್ತುಂ ಗಿಣಿ (Parrot) ನಾಪತ್ತೆ ಪ್ರಕರಣ ವೈರಲ್ ಆಗಿತ್ತು. ನಾಪತ್ತೆಗಿಂತಲೂ ಹುಡುಕಿಕೊಟ್ಟವರಿಗೆ ಘೋಷಿಸಿದ ಬಹುಮಾನವೇ ಚರ್ಚಿತ ವಿಷಯವಾಗಿತ್ತು
ತುಮಕೂರು : ವಾರದ ಹಿಂದೆ ಮನೆಯಿಂದ ಹಾರಿ ಹೋಗಿದ್ದ ರುಸ್ತುಂ ಗಿಣಿ (Parrot) ಕೊನೆಗೂ ಮಾಲೀಕರ ಮನೆ ಸೇರಿದೆ. ಇದರಿಂದ ಮಾಲೀಕರ ಮನಸ್ಸು ಕೂಡಾ ಖುಷಿಯಾಗಿದೆ.
ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಈ ಗಿಣಿಯನ್ನು (Parrot) ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಪತ್ತೆ ಮಾಡಿದ್ದಾರೆ. ಗಿಣಿ ಸಿಕ್ಕ ತಕ್ಷಣ ಮಾಲೀಕ ಅರ್ಜುನ್ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿಜದ ಅರ್ಜುನ್ ಮತ್ತು ಅವರ ಪತ್ನಿ ಇದು ನಮ್ಮದೇ ಗಿಣಿ ಎಂದು ಖಾತ್ರಿ ಪಡಿಸಿದ್ದಾರೆ.
ಇದನ್ನೂ ಓದಿ : bbmp high court : ಜ್ಯೋತಿಷ್ಯ ಕೇಂದ್ರ ಮುಚ್ಚುವಂತೆ ಆದೇಶಿಸಿದ್ದ ಬಿಬಿಎಂಪಿಗೆ ಮುಖಭಂಗ
ಬಳಿಕ ಗಿಣಿಯನ್ನು (Parrot) ತಮ್ಮ ವಶಕ್ಕೆ ಪಡೆದಿದ್ದು, ಗಿಣಿಯನ್ನು ಹುಡುಕಿಕೊಟ್ಟ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಅವರಿಗೆ 85 ಸಾವಿರ ರೂಪಾಯಿ ಬಹುಮಾನದ ಮೊತ್ತ ನೀಡಿದ್ದಾರೆ. ಈ ಹಿಂದೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಗಿಣಿ ಕಳೆದು ಹೋದ ದಿನದಿಂದ ಹುಡುಕಾಟ ನಡೆಸಿದರೂ ಗಿಣಿ ಪತ್ತೆಯಾಗಿರಲಿಲ್ಲ. ಹೀಗಾಗಿ ಜ್ಯೋತಿಷಿಯ ಮೊರೆ ಹೋಗಿದ್ದ ದಂಪತಿ ತಮ್ಮ ನೋವು ತೋಡಿಕೊಂಡಿದ್ದರು. ಈ ವೇಳೆ ಬಹುಮಾನದ ಮೊತ್ತವನ್ನು 50 ಸಾವಿರದಿಂದ 85 ಸಾವಿಕರ್ಕೆ ಏರಿಸಿ ಗಿಣಿ ಸಿಗುತ್ತದೆ ಅಂದಿದ್ದರಂತೆ. ಬಹುಮಾನದ ಮೊತ್ತ ಏರಿಸದ ಬೆನ್ನಲ್ಲೇ ಗಿಣಿಯೂ ಸಿಕ್ಕಿದೆ.
ಇದನ್ನೂ ಓದಿ : Cops cannot stop vehicle Praveen sood : ಡಿಜಿಪಿ ಆದೇಶಕ್ಕೆ ಕಿಮ್ಮತಿಲ್ವ : ಎರಡನೇ ಬಾರಿ ಆದೇಶ ಹೊರಡಿಸಿದ ಪ್ರವೀಣ್ ಸೂದ್
ಜಾಲಹಳ್ಳಿ ಪೊಲೀಸರ ಕಾರ್ಯಕ್ಕೆ ಭೇಷ್ ಅನ್ನಲೇಬೇಕು, ಕಾನೂನು ಭಕ್ಷಕರಿಗೆ ಹೀಗಾದ್ರೆ ಭಯ ಹುಟ್ಟುತ್ತದೆ
ಕೊಪ್ಪಳದ ಹಂದಿ ಕಳ್ಳರ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್
90 ಹಂದಿ ಕದಿಯಲು ಬಂದ ಖದೀಮರು ಮಾಲೀಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಜಾಲಹಳ್ಳಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು
ಕೊಪ್ಪಳ : ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾದ ದರೋಡೆಕೋರರ ಮೇಲೆ ಬೆಂಗಳೂರು ಪೊಲೀಸರು ಆತ್ಮ ರಕ್ಷಣೆ ಸಲುವಾಗಿ ಗುಂಡಿನ ದಾಳಿ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೂಷ್ಟೂರು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಗಲಿ ಹತ್ತಿರ ಫಾರಂ ಒಂದಕ್ಕೆ ಜುಲೈ 16ರ ರಾತ್ರಿ 2 ಗಂಟೆ ಸುಮಾರಿಗೆ ನುಗ್ಗಿದ ಖದೀಮರು 90 ಹಂದಿಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಫಾರಂ ಮಾಲೀಕರಾದ ಸಂದೀಪ್ ಮತ್ತು ರಾಮಚಂದ್ರ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಈಶಾನ್ಯ ಡಿಸಿಪಿ ಅನೂಪ್ ಶೆಟ್ಟಿ ತಂಡವೊಂದರನ್ನು ರಚಿಸಿದ್ದರು. ಈ ವೇಳೆ ಹಂದಿ ಕದಿಯಲು ಬಂದ ಖದೀಮರು ಮರಳಿ ಗ್ರಾಮದ ಟೋಲ್ ಬಳಿ ನಿಲ್ಲಿಸಿ ಮಲಗಿದ್ದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಾಗ ಕ್ಯಾಬಿನ್ ನಲ್ಲಿ ಇಬ್ಬರು ಮತ್ತು ಹಿಂದೆ ಮೂವರು ಮಲಗಿದ್ದರು. ಆರೋಪಿಗಳನ್ನು ಬಂಧಿಸಲು ಪೊಲೀಸರು ಗಾಡಿ ಹತ್ತಿದ್ರೆ ಎಚ್ಚರಗೊಂಡ ದರೋಡೆಕೋರರು ವಾಹನ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಅತೀ ವೇಗದಲ್ಲಿ ಗಾಡಿ ಓಡಿಸಿಕೊಂಡು ಹೋದ ವೇಳೆ ದರೋಡೆಕೋರರ ವಾಹನದಲ್ಲಿದ್ದ ಮುಖ್ಯ ಕಾನ್ಸ್ ಟೇಬಲ್ ಬಸವರಾಜ ಅವರನ್ನು ಕೊಲೆ ದುಷ್ಕರ್ಮಿಗಳು ಮುಂದಾಗಿದ್ದಾರೆ. ಈ ವೇಳೆ ಹಿಂಬದಿ ವಾಹನದಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಪ್ರವೀಣ್ ಖದೀಮರತ್ತ ಗುಂಡು ಹಾರಿಸಿದ್ದಾರೆ.
ಈ ವೇಳೆ ಅಶೋಕ ಮತ್ತು ಶಂಕರ ರಮೇಶ್ ಗಾಯಗೊಂಡಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ ಸಾಥ್ ನೀಡಿದ್ದ ಸಿಂಧನೂರು ತಾಲೂಕಿನ ಅಂಬಾಮಠದ ಅಂಬಣ್ಣ ರಾಮಣ್ಣ, ಪರಶುರಾಮ ರಾಮಣ್ಣ ಎಂಬವರನ್ನು ಬಂಧಿಸಿದ್ದಾರೆ.
Discussion about this post