ಉತ್ತರ ಪ್ರದೇಶ : ಜಗತ್ತಿನಲ್ಲಿ ಎಂಥಾ ಕ್ರಿಮಿನಲ್ ಗಳಿದ್ದಾರೆ ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ರೈಲಿನ ಟಾಯ್ಲೆಟ್ ನಲ್ಲಿರುನ ಮಗ್ ಗಳನ್ನು ಕದಿಯುತ್ತಾರೆ ಅಂದ ಮೇಲೆ ಚಿನ್ನಾಭರಣ ಯಾವ ಲೆಕ್ಕ. ಇನ್ನು ನಿಲ್ಲಿಸಿದ ವಾಹನಗಳ ಟಯರ್ ಕದಿಯೋದು ಮಾಮೂಲಿ. ಆದರೆ ವಿಮಾನದ ಟಯರ್ ಗಳನ್ನೇ ಕದಿಯುತ್ತಾರೆ ಅಂದ್ರೆ ನಂಬಲು ಸಾಧ್ಯವೇ. ಹಾಗಂತ ಕದ್ದಿರೋದು ಮಾಮೂಲಿ ವಿಮಾನದ ಟಯರ್ ಗಳನಲ್ಲ. ಬದಲಾಗಿ ಯುದ್ಧ ವಿಮಾನ ಮಿರಾಜ್-2000 ರ ಹೊಚ್ಚ ಹೊಸ ಟೈರ್ ಗಳನ್ನೇ ಎಗರಿಸಿದ್ದಾರೆ.
ಮಿರಾಜ್-2000 ಯುದ್ಧ ವಿಮಾನದ ಟೈರ್ ಗಳನ್ನು ರಾಜಸ್ಥಾನದ ಜೋಧ್ ಪುರಕ್ಕೆ ಟ್ರಕ್ ನಲ್ಲಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಶಾಹೀನ್ ಪಥ್ ನಲ್ಲಿ ಟ್ರಕ್ ಸಾಗುತ್ತಿದ್ದ ವೇಳೆ ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಟ್ರಕ್ ನಲ್ಲಿರಿಸಲಾಗಿದ್ದ, ಟೈರ್ ಗಳಿಗೆ ಬಿಗಿದಿದ್ದ ಹಗ್ಗವನ್ನು ತುಂಡರಿಸಿ ಕಳ್ಳತನ ಮಾಡಿದ್ದಾರೆ.
ಈ ಸಂಬಂಧ ಲಖನೌ ನ ಆಷಿಯಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಪೊಲೀಸರು ಟ್ರಕ್ ಡ್ರೈವರ್ ಅನ್ನು ವಿಚಾರಣೆ ಮಾಡುತ್ತಿದ್ದಾರೆ.
Discussion about this post