ಬೆಂಗಳೂರು : ದಸರಾ ರಜೆ ಮುಗಿಸಿ ಶಾಲೆಗೆ ಮರಳುವ ಮಕ್ಕಳಿಗೆ ಗುಡ್ ನ್ಯೂಸ್ ಕೊಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಅಕ್ಟೋಬರ್ 20ಕ್ಕೆ ದಸರಾ ರಜೆ ಮುಕ್ತಾಯವಾಗಲಿದ್ದು, 21 ರಿಂದ ಶಾಲೆಗಳು ಪ್ರಾರಂಭವಾಗಲಿದೆ. ಹೀಗಾಗಿ ಅಕ್ಟೋಬರ್ 21 ರಿಂದ ಬಿಸಿಯೂಟ ಪ್ರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಇದನ್ನೂ ಓದಿ : ದಸರಾ ಮುಗಿದ ಬೆನ್ನಲ್ಲೇ 1 ರಿಂದ 5ನೇ ತರಗತಿ ಪ್ರಾರಂಭ : ಶಿಕ್ಷಣ ಸಚಿವರಿಂದ ಸುಳಿವು
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಬಿಸಿಯೂಟ ಪ್ರಾರಂಭಿಸುವ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾರ್ಗಸೂಚಿಯನ್ನು ಕಳುಹಿಸಿಕೊಡಲಾಗಿದ್ದು, ಅಗತ್ಯ ಸಿದ್ದತೆಗಳು ಮುಕ್ತಾಯ ಹಂತದಲ್ಲಿದೆ ಅಂದಿದ್ದಾರೆ.
ಇದನ್ನೂ ಓದಿ : ಕನ್ನಡ ರಾಜ್ಯೋತ್ಸವದಂದು ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್
ಇನ್ನು ಒಂದರಿಂದ 5ನೇ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಸಿದ್ದವಾಗಿದೆ. ಆದರೆ ತಾಂತ್ರಿಕ ಸಲಹಾ ಸಮಿತಿಯ ಅನುಮತಿ ಅಗತ್ಯವಾಗಿದ್ದು, ದಸರಾ ನಂತರ ಈ ಸಭೆ ನಡೆಯಲಿದೆ. ಸಭೆಯಲ್ಲಿ ತಜ್ಞರು ಕೊಟ್ಟ ಸೂಚನೆಗಳ ಅನುಸಾರ ಶಾಲೆ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
department of public instructions has decided to resume cooking under the midday meal from October 21 on which day the schools reopen after Dasara Vacation.
Discussion about this post