ಈಗ್ಲೂ ಕಾರು ಪ್ರಿಯರ ಹಾಟ್ ಫೇವರಿಟ್ ಆಗಿರುವ ಜಿಪ್ಸಿ ಕಾರಿನ ಉತ್ತರಾಧಿಕಾರಿ ಬರಲೇ ಇಲ್ಲ ಅನ್ನುವ ಕೊರಗು ಎಲ್ಲರನ್ನೂ ಕಾಡುತ್ತಿತ್ತು.
ಇದೀಗ ಇದನ್ನು ಮನಗಂಡಿರುವ ಸುಜುಕಿ ಸಂಸ್ಥೆ ಜಿಪ್ಸಿ ಜಾಗಕ್ಕೆ ಜಿಮ್ನಿಯನ್ನು ಪರಿಚಯಿಸಲು ಮುಂದಾಗಿದೆ.
ಜಿಮ್ನಿ ಕಾರು 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್ಜೆ10ರ ಹೊಸ ತಲೆಮಾರಿನ ಅವೃತ್ತಿಯಾಗಿದೆ. ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981 ರಿಂದ 1998ರ ಅವಧಿಯಲ್ಲಿ ಮಾರಾಟವಾಗಿತ್ತು.
ಬಳಿಕ ಮೂರನೇ ತಲೆಮಾರಿನ ಆವೃತ್ತಿಯು ಜನಪ್ರಿಯಗೊಂಡು ಇದೀಗ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಮಾರಾಟಕ್ಕೆ ಸಿದ್ದವಾಗುತ್ತಿದೆ.
ಜಿಮ್ನಿ ಕಾರುಗಳು ವಿದೇಶದ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಎರಡು ವೆರಿಯೆಂಟ್ಗಳಲ್ಲಿ ಲಭ್ಯವಾಗಲಿದ್ದು, ಒಂದು ಸ್ಟ್ಯಾಂಡರ್ಡ್ ವರ್ಷನ್ ಮತ್ತು ಟಾಪ್ ಎಂಡ್ ಮಾದರಿಯಾಗಿ ಸಿಯೈರಾ ಎನ್ನುವ ಕಾರು ಮಾದರಿಯು ಸಿದ್ದಗೊಂಡಿದೆ.
ಇವುಗಳಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಕ್ಸ್ಜಿ, ಎಕ್ಸ್ಎಲ್ ಮತ್ತು ಎಕ್ಸ್ಸಿ ಎನ್ನುವ ಮಾದರಿಗಳು ಖರೀದಿಗೆ ಲಭ್ಯವಾಗಿದ್ದು, ಕೇಲವೇ ಕೆಲವು ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸೌಲಭ್ಯಗಳು ಪ್ರತಿ ಮಾದರಿಯಲ್ಲೂ ಕಾಣಬಹುದಾಗಿದೆ.
ಜಿಪ್ಸಿಗಿಂತಲೂ ಸಣ್ಣದಾಗಿರುವ ಜಿಮ್ನಿ ಕಾರಿಗೆ 6 ಲಕ್ಷದಿಂದ 8.50 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿದೆ. ತ್ರಿ ಡೋರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಮಾಹಿತಿಗಳ ಪ್ರಕಾರ ಸುಜುಕಿ ಜಿಮ್ನಿ ಕಾರುಗಳು ಈ 2020ರ ಮಾರ್ಚ್ ಹೊತ್ತಿಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
Discussion about this post