2020ರ ಮಾರ್ಚ್ 31ರ ನಂತರ BS4 (ಭಾರತ್ ಸ್ಟೇಜ್ 4) ವಾಹನಗಳ ಮಾರಾಟ ಮತ್ತು ರಿಜಿಸ್ಟ್ರೇಶನ್ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಬಿಎಸ್4 ಆದೇಶ ಜಾರಿಗೊಂಡರೆ 1500ಸಿಸಿಗಿಂತ ಕಡಿಮೆ ಸಾಮರ್ಥ್ಯದ ಡೀಸೆಲ್ ವಾಹನ ಓಡಾಡುವಂತಿಲ್ಲ.
ಈ ಕಾರಣದಿಂದ 2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸುವುದಾಗಿ ಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಘೋಷಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾರುತಿ ಅಧ್ಯಕ್ಷ ಆರ್ ಸಿ ಭಾರ್ಗವ್, ಈಗಾಗಲೇ ಮಾರುತಿ ಡೀಸೆಲ್ ಕಾರುಗಳ ಬೇಡಿಕೆ ಕುಸಿಯುತ್ತಿದೆ. ಈ ಕಾರಣವನ್ನೂ ಪರಿಗಣಿಸಿ ಡೀಸೆಲ್ ಕಾರುಗಳ ಮಾರಾಟ ಮಾಡದಿರಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
ಒಂದು ವೇಳೆ ಭವಿಷ್ಯದಲ್ಲಿ 1500 ಸಿಸಿ ಡೀಸೆಲ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಲ್ಲಿ ಮಾತ್ರ ಅಂತಹ ಕಾರುಗಳನ್ನು ಉತ್ಪಾದಿಸಲು ಮಾರುತಿ ನಿರ್ಧರಿಸಿದೆ.
ಮಾಹಿತಿ ಪ್ರಕಾರ 1500ಸಿಸಿ ಅಧಿಕ ಸಾಮರ್ಥ್ಯದ ಡೀಸೆಲ್ ಕಾರುಗಳಿಗೆ ಬೇಡಿಕೆ ನಿರೀಕ್ಷಿಸಲಾಗುತ್ತಿದೆ. ಸದ್ಯ ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಲೆನೋ(1248ಸಿಸಿ) ಡೀಸೆಲ್ ಕಾರು ಮಾತ್ರ ಈ ಪಟ್ಟಿಗೆ ಸೇರಲಿದೆ ಎಂದು ಭಾರ್ಗವ್ ವಿವರಿಸಿದ್ದಾರೆ.
Discussion about this post