ಮಾಸ್ಕೋ : ರಷ್ಯಾದ ಸರ್ಕಾರಿ ಸುದ್ದಿವಾಹಿನಿಯ ನೇರ ಪ್ರಸಾರದ ವೇಳೆ ಯುದ್ಧ ವಿರೋಧಿ ಫಲಕ ಪ್ರದರ್ಶಿಸಿದ ಪತ್ರಕರ್ತೆಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದೆ.
ಈಗಾಗಲೇ ರಷ್ಯಾದಲ್ಲಿ ಸುಳ್ಳು ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳು ಜಾರಿಯಲ್ಲಿದೆ. ಹೀಗಾಗಿ ಯುದ್ಧ ವಿರೋಧಿ ಫಲಕ ಪ್ರದರ್ಶಿಸಿದ ಪತ್ರಕರ್ತೆ ಮರೀನಾ ಓವ್ ಸ್ಯಾನಿಕೋವಾ ವಿರುದ್ಧವೂ ಈ ಕಾನೂನುಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿದೆ.
ಕಳೆದ ಸೋಮವಾರ ಸುದ್ದಿ ನೇರಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಟುಡಿಯೋಗೆ ನುಗ್ಗಿದ ಪತ್ರಕರ್ತೆ ಮರೀನಾ ಓವ್ ಸ್ಯಾನಿಕೋವಾ ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸಿ ಅನ್ನುವ ಫಲಕ ಪ್ರದರ್ಶಿಸಿದ್ದರು.
ಜೊತೆಗೆ ಇದೇ ಫಲಕದಲ್ಲಿ ರಷ್ಯಾದ ಸುದ್ದಿ ವಾಹಿನಿಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಅಪಾದಿಸಿದ್ದರು.
Discussion about this post