Mangaluru ಹಿಜಾಬ್ ಗಲಾಟೆ ಸಂದರ್ಭದಲ್ಲಿ ಇದೇ CFI ಸುದ್ದಿಯಲ್ಲಿತ್ತು
ಮಂಗಳೂರು : ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಆಗಸ್ಟ್ 11 ರಂದು ಆಯೋಜಿಸಲಾಗಿರುವ ಭಾರತ ಮಾತಾ ಪೂಜಾ ದಿನ ಕಾರ್ಯಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿರುವ ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರಿಗೆ ಮನವಿ ನೀಡಿದೆ.
ಈ ಬಗ್ಗೆ ಮಾತನಾಡಿರುವ CFI ಜಿಲ್ಲಾಧ್ಯಕ್ಷ ತಾಜುದ್ದೀನ್. ಇದೊಂದು ಹಿಂದು ಸಿದ್ದಾಂತದ ಕಾರ್ಯಕ್ರಮ. ಆಗಸ್ಟ್ 11ಕ್ಕೆ ನಿಗದಿ ಪಡಿಸಿರುವ ಕಾರ್ಯಕ್ರಮ ರದ್ದುಗೊಳಿಸಬೇಕು. ಭಾರತದ ಭೂಪಟವನ್ನೇ ಬದಲಾಯಿಸಿ, ಭಗವಾ ಧ್ವಜದೊಂದಿಗೆ ಆಮಂತ್ರಣ ಪತ್ರಿಕೆಯನ್ನು ಮಾಡಿರುವುದು ಸರಿಯಲ್ಲ. ಕಾಲೇಜು ಪ್ರಾಂಶುಪಾಲರ ಬೆಂಬಲದೊಂದಿಗೆ ಈ ಕೆಲಸವನ್ನು ಎಬಿವಿಪಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : Kerala Air India crash : ಸಂತ್ರಸ್ತರಿಂದಲೇ ಆಸ್ಪತ್ರೆ : ಏರಿಂಡಿಯಾ ದುರಂತ ಬಳಿಕ ಅರಳಿದ ಕನಸು
ಈ ನಡುವೆ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನಲ್ಲಿ ನಡೆಸಲು ಉದ್ದೇಶಿಸಿರುವ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲೆ ಅನುಸೂಯ ರೈ ಸ್ಪಷ್ಟಪಡಿಸಿದ್ದಾರೆ.
Discussion about this post