ದಕ್ಷಿಣ ಕನ್ನಡ ಜಿಲ್ಲೆಯ ಮಳೆ ಅಬ್ಬರಿಸುತ್ತಿದೆ. ಹಲವು ಕಡೆಗಳಲ್ಲಿ ಅನಾಹುತ ಸಂಭವಿಸಿದೆ. ಆದರೆ ಜಿಲ್ಲೆಯಿಂದ ಸಚಿವರಾದ ಮೂವರು ನಾಪತ್ತೆಯಾಗಿದ್ದಾರೆ. ಪರಿಹಾರ ಕಾರ್ಯಗಳತ್ತ ಅದ್ಯಾವ ಸಚಿವನೂ ಚಿತ್ತ ಹರಿಸಿಲ್ಲ. ಈ ನಡುವೆ Mangalore rain ಅಬ್ಬರಕ್ಕೆ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದೆ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ.( Mangalore rain) ಹಲವು ಕಡೆಗಳಲ್ಲಿ ಅನಾಹುತ ಸಂಭವಿಸಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ಮನೆಯ ಮೇಲಿದ್ದ ಗುಡ್ಡ ಕುಸಿದು ನಾಲ್ವರು ಮಣ್ಣಿನಡಿ ಸಿಲುಕಿದ ದುರ್ಘಟನೆ ಸಂಭವಿಸಿದೆ.
ಹೆನ್ರಿ ಅನ್ನುವವರಿಗೆ ಸೇರಿದ ಜಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯ ಹೊರಗಿರುವ ಕೊಠಡಿಗೆ ಗುಡ್ಡ ಜರಿದು ಬಿದ್ದ ಪರಿಣಾಮ ಹೆನ್ರಿಯವರ ತೋಟದ ಕೆಲಸಕ್ಕೆ ಬಂದ ಉತ್ತರ ಕನ್ನಡದ ನಾಲ್ವರು ಮಣ್ಣಿನೊಳಗೆ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ : ವೀರೇಂದ್ರ ಹೆಗ್ಗೆಡೆ ರಾಜ್ಯಸಭೆಗೆ : ಪಿಟಿ ಉಷಾ ವಿಜಯೇಂದ್ರ ಪ್ರಸಾದ್ ಇಳಯರಾಜರಿಗೂ ಗೌರವ
ಇದೀಗ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಇನ್ನುಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಜೆಸಿಬಿ ವಾಹನಗಳನ್ನು ತರಿಸಲಾಗಿದ್ದು, ಮಣ್ಣು ತೆರವು ಮಾಡಲಾಗುತ್ತಿದೆ. ಸ್ಥಳಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಸಾರ್ವಜನಿಕವಾಗಿಯೇ ನಲಪಾಡ್ ನ ಅವಮಾನಿಸಿದ್ರ ಸಿದ್ದರಾಮಯ್ಯ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ಬಂದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್ ( Mohammed Haris Nalapad ) ಇಂದು ಮುಜುಗರಕ್ಕೆ ಈಡಾಗಿದ್ದಾರೆ. ಸಿದ್ದರಾಮಯ್ಯ ( Siddaramaiah ) ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ಸಮಯ ನಿಗದಿಗೊಳಿಸುವ ಸಲುವಾಗಿ ಸಿದ್ದರಾಮಯ್ಯ ನಿವಾಸಕ್ಕೆ ನಲಪಾಡ್ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಮೈಸೂರಿಗೆ ಹೊರಡುವ ಗಡಿಬಿಡಿಯಲ್ಲಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳನ್ನು ಮಾತನಾಡಿಸಿದ ಸಿದ್ದರಾಮಯ್ಯ ನಲಪಾಡ್ ಕಡೆಗೆ ತಿರುಗಿ ನೋಡದೆ ಮೈಸೂರಿನತ್ತ ಮುಖ ಮಾಡಿದ್ದಾರೆ.
ಸಿದ್ದರಾಮಯ್ಯ ಮನೆಯಿಂದ ಹೊರ ಬರುತ್ತಿದ್ದಂತೆ ನಲಪಾಡ್ ಮಾತನಾಡಿಸಲು ಮುಂದಾಗಿದ್ದಾರೆ, ಆಗ್ಲೂ ಸಿದ್ದರಾಮಯ್ಯ ಕ್ಯಾರೇ ಅಂದಿಲ್ಲ. ಆದಾದ ಬಳಿಕವೂ ಸಿದ್ದರಾಮಯ್ಯ ಬೆನ್ನ ಹಿಂದೆಯೇ ನಲಪಾಡ್ ನಡೆದು ಬಂದಿದ್ದಾರೆ. ಆದಾದ ಬಳಿಕ ಕಾರು ಹತ್ತಿದ ನಂತರ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ನಲಪಾಡ್ ಮುಂದಾಗಿದ್ದಾರೆ. ಆಗ್ಲೂ ನೋ ರೆಸ್ಪಾನ್ಸ್. ಇದಾದ ಬಳಿಕ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರ ಬಳಿಗೆ ನಲಪಾಡ್ ಹೋಗಿದ್ದಾರೆ. ಆಪ್ತ ಸಹಾಯಕ, ನಲಪಾಡ್ ಬಂದಿದ್ದಾರೆ ಅಂದಾಗ್ಲೂ, ಸಿದ್ದರಾಮಯ್ಯ ಮತ್ತೊಬ್ಬರ ಕಡೆಗೆ ತಿರುಗಿ ಮನವಿ ಸ್ವೀಕರಿಸಿದ್ದಾರೆ.
ಈ ಹಿಂದೆ ಯುವ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ರಕ್ಷಾ ರಾಮಯ್ಯ ಪರ ಸಿದ್ದರಾಮಯ್ಯ ನಿಂತ್ರೆ, ನಲಪಾಡ್ ಪರ ಡಿಕೆಶಿ ನಿಂತಿದ್ದರು. ಕೊನೆಗೂ ರಕ್ಷ ರಾಮಯ್ಯ ಅವರಿಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿರಲಿಲ್ಲ. ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷನಾಗಿರೋದು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ ಅನ್ನಲಾಗಿದೆ.
Discussion about this post