ಮಂಗಳೂರು : ಪ್ರೇಮಿಗಳಿಬ್ಬರ ಖಾಸಗಿ ಸಮಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರಿನ ಶಾಪಿಂಗ್ ಮಾಲ್ ಒಂದರಲ್ಲಿನ ಬಾಲ್ಕನಿಯಲ್ಲೇ ಪ್ರೇಮಿಗಳಿಬ್ಬರು ಪರಸ್ಪರ ಜೊತೆಯಾಗಿದ್ದ ಸಂದರ್ಭದಲ್ಲಿ ಕದ್ದು ಮುಚ್ಚಿ ವಿಡಿಯೋ ಮಾಡಲಾಗಿದೆ. ಮಂಗಳೂರಿನ ಸ್ಥಳೀಯ ಭಾಷೆಯ ಆಡಿಯೋ ವಿಡಿಯೋದಲ್ಲಿ ದಾಖಲಾಗಿದ್ದು, ಮಾನಮರ್ಯಾದೆ ತೆಗೆಯುವ ನಿಟ್ಟಿನಲ್ಲೇ ಇದನ್ನು ರೆಕಾರ್ಡ್ ಮಾಡಿರುವುದು ಸ್ಪಷ್ಟವಾಗಿದೆ.
ಇನ್ನು ಈ ವಿಡಿಯೋಗೆ ಕಮೆಂಟ್ ಕೂಡಾ ಹರಿದು ಬರುತ್ತಿದ್ದು ಪ್ರೇಮಿಗಳ ಈ ಬಹಿರಂಗ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ನಾಲ್ಕು ಗೋಡೆಯ ನಡುವಿನ ಕೆಲಸವನ್ನು ಬಯಲಲ್ಲಿ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು ಹೀಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ರೆ ಅವರ ಭವಿಷ್ಯ ಪ್ರಶ್ನೆ ಎನಾಗಬೇಕು. ಕರಾವಳಿಯ ಕಾನೂನು ಸುವ್ಯವಸ್ಥೆಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.
Discussion about this post