ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್ (Mangalore kissing) ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಮಂಗಳೂರು : ಹೆತ್ತವರು ಕಷ್ಟ ಪಟ್ಟು ದುಡಿದು ಮಕ್ಕಳ ಎಜುಕೇಶನ್ ಗಾಗಿ ದುಡ್ಡು ಸುರಿಯುತ್ತಾರೆ. ಮಕ್ಕಳು ಓದಿ ಒಂದು ಕೆಲಸ ಗಿಟ್ಟಿಸಿ ಬದುಕು ಕಟ್ಟಿಕೊಳ್ಳಲಿ ಎಂದು ಒದ್ದಾಡುತ್ತಾರೆ. ಆದರೆ ಕೆಲ ವಿದ್ಯಾರ್ಥಿಗಳು ಮೋಜು ಮಸ್ತಿ ಎಂದು ಕಾಲ ಕಳೆಯುತ್ತಾರೆ.ಇದೀಗ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳು ಕಿಸ್ಸಿಂಗ್ ಸ್ಪರ್ಧೆ (Mangalore kissing) ನಡೆಸಿ ವೈರಲ್ ಆಗಿದ್ದಾರೆ.
ಮನೆಯೊಂದರಲ್ಲಿ ನಡೆದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಕಿಸ್ಸಿಂಗ್ ಸ್ಪರ್ಧೆ (Mangalore kissing) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮವಸ್ತ್ರದಲ್ಲೇ ನಡೆದ ಈ ಕಿಸ್ಸಿಂಗ್ ಸ್ಪರ್ಧೆ ಕರಾವಳಿಯನ್ನು ತಲೆ ತಗ್ಗಿಸುವಂತೆ ಮಾಡಿದೆ.
ಇದನ್ನು ಓದಿ : NEET 2022 : ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪು ಪರಿಶೀಲನೆ
ಈ ನಡುವೆ ವಿಡಿಯೋ ವೈರಲ್ ( video viral) ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಈ ಸಂಬಂಧ ತನಿಖೆ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಕಿಸ್ಸಿಂಗ್ ಸ್ಪರ್ಧೆಗಾಗಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿದ್ದರೆ ಅನ್ನುವ ಬಗ್ಗೆಯೂ ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಇನ್ನು ಈ ವಿಡಿಯೋದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪರಸ್ಪರ ಚುಂಬಿಸುತ್ತಿದ್ರೆ ಸುತ್ತ ಕುಳಿತ ಇತರ ವಿದ್ಯಾರ್ಥಿನಿಯರು ಹುರಿದುಂಬಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೀಗಾಗಿ ಪ್ರಕರಣವನ್ನು ಇದೀಗ ಗಂಭೀರವಾಗಿ ಪರಿಗಣಿಸಲಾಗಿದೆ.
ra ra rakkamma : ರಾ ರಾ ರಕ್ಕಮ್ಮ ತಂದಿಟ್ಲು ಸಂಕಷ್ಟ
ಈ ಸಾಮಾಜಿಕ ಜಾಲತಾಣ ಎಷ್ಟು ಒಳ್ಳೆಯದು ಮಾಡಿದೆಯೋ ಅಷ್ಟೇ ಕೆಡುಕು ಮಾಡಿದೆ. ಅದರಲ್ಲೂ ರೀಲ್ಸ್ ಹುಚ್ಚು ಕೇಳುವುದೇ ಬೇಡ. ಯುವಜನತೆಯನ್ನು ಸೆನ್ಸ್ ಇಲ್ಲದಂತೆ ಮಾಡಿದೆ. ಅದಕ್ಕೆ ಹೊಸ ಸೇರ್ಪಡೆ ವಿಕ್ರಾಂತ್ ರೋಣದ ರಾ ರಾ ರಕ್ಕಮ್ಮ
ಹೈದರಬಾದ್ : ಒಂದು ಸಿನಿಮಾ ಹಾಡು ವೈರಲ್ ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಹಾಡಿನದ್ದೇ ಸದ್ದು. ಅದಕ್ಕೆ ಸರಿಯಾಗಿ ಮಾರುಕಟ್ಟೆ ನೂರಾರು ಶಾರ್ಟ್ ವಿಡಿಯೋ APPಗಳು ಬಂದಿದೆ. ಯುವಜನತೆಯ ಹುಚ್ಚನ್ನು ಬಳಸಿಕೊಳ್ಳುವ APPಗಳು ನಮ್ಮದೇ ಡಾಟಾದಲ್ಲಿ ದುಡ್ಡು ಬಾಚಿಕೊಳ್ಳುತ್ತಿದೆ. ರೀಲ್ಸ್ ಅನ್ನುವುದು ಯಾವಾಗ ಹವ್ಯಾಸದ ಪಟ್ಟ ಕಳಚಿಟ್ಟು ಚಟ ಅನ್ನಿಸಿತೋ, ಆಗ್ಲೇ ಸಮಸ್ಯೆ ಶುರುವಾಗಿದೆ.
ಈ ನಡುವೆ ಮೆಟ್ರೋ ನಿಲ್ದಾಣದಲ್ಲಿ ರೀಲ್ಸ್ ಮಾಡಿ ಹೈದರಬಾದ್ ನಲ್ಲಿ ಯುವತಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅದು ಕೂಡಾ ಸುದೀಪ್ ನಟನೆ ರಾರಾ ರಕ್ಕಮ್ಮ ಹಾಡಿಗೆ ಅನ್ನುವುದು ಗಮನಾರ್ಹ ಅಂಶ. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನ ಒಳಗಡೆ ಈಕೆ ರೀಲ್ಸ್ ಮಾಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದು ಗೊತ್ತಿಲ್ಲ ಅಂದ್ರೆ ಹೇಗೆ ಅನ್ನುವುದು ಇವರ ವಾದ.
ಹೈದರಬಾದ್ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಲು ರಾರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ ಲೋ ಮಾಡಿದ್ಲು. ಈ ಹಾಡು ಸಹಜವಾಗಿಯೇ ವೈರಲ್ ಆಗಿತ್ತು. ತಗೊಳ್ಳಿ ಕೆಲವರು ಈಕೆಯ ಪ್ರತಿಭೆಯನ್ನು ಮೆಚ್ಚಿದ್ರೆ ಮತ್ತೆ ಕೆಲವರು ಅತಿರೇಕದ ವರ್ತನೆ ಎಂದು ಜರೆದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಹೀಗೆಲ್ಲಾ ನಡೆದುಕೊಳ್ಳಬಾರದು ಅಂದಿದ್ದಾರೆ.
ಇನ್ನು ಕೆಲ ಮಂದಿ ಮೆಟ್ರೋ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡಲು, ಡ್ಯಾನ್ಸ್ ಮಾಡಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ರೈಲು ನಿಲ್ದಾಣವನ್ನು ಪಿಕ್ ನಿಕ್ ಸ್ಪಾಟ್ ಮಾಡಿದ್ದು ಯಾವಾಗ, ಇದೇನು ಡ್ಯಾನ್ಸ್ ವೇದಿಕೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗಳಿಂದ ಸುಸ್ತಾದ ಮೆಟ್ರೋ ಅಧಿಕಾರಿಗಳು, ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಜರುಗಿಸುತ್ತೇವೆ ಅಂದಿದ್ದಾರೆ. ಹಾಗಾದ್ರೆ ಈ ರೀತಿ ವಿಡಿಯೋ ಮಾಡಿದ್ದು ಯುವತಿಯೇ ತಪ್ಪಾ…. ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.
Discussion about this post