ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ಮೊಸಳೆ ಕಾಣಿಸಿಕೊಂಡಿದೆ ಅನ್ನಲಾಗಿದೆ. ವಿಡಿಯೋ ಆಡಿಯೋ ಕೇಳಿದರೆ ಸತ್ಯ ಅನ್ನುವಂತಿದೆ.
ಮಂಗಳೂರು : ಬಂಟ್ವಾಳ ತಾಲೂಕಿನ ಸರಪಾಡಿ ಸಮೀಪದ ನೇತ್ರಾವತಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೇತ್ರಾವತಿ ನದಿಗೆ ಇಳಿಯುವವರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಆದರೆ ಈ ವಿಡಿಯೋದಲ್ಲಿರುವುದು ನೇತ್ರಾವತಿ ನದಿ ಹೌದೋ ಅಲ್ಲವೋ, ಹೊಸ ವಿಡಿಯೋ ಅಥವಾ ಹಳೆ ವಿಡಿಯೋ ಅನ್ನುವ ಕುರಿತಂತೆ ಇನ್ನೂ ಗೊಂದಲಗಳು ಮುಂದುವರಿದಿದೆ. ಅರಣ್ಯಾಧಿಕಾರಿಗಳು ಕೂಡಾ ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ವಿಡಿಯೋದಲ್ಲಿರುವ ಆಡಿಯೋ ಗಮನಿಸಿದರೆ ಇದು ಮಂಗಳೂರಿನ ವಿಡಿಯೋ ಅನ್ನುವುದರಲ್ಲಿ ಅನುಮಾನವಿಲ್ಲ. ಬ್ಯಾರಿ ಭಾಷೆಯ ಆಡಿಯೋ ಇದರಲ್ಲಿದ್ದು, ಮೊಸಳೆಯ ಬಗ್ಗೆ ವಿವರಣೆ ಕೊಡಲಾಗಿದೆ
2019ರಲ್ಲಿ ಧರ್ಮಸ್ಥಳದ ಪಾಳು ಬಾವಿಯೊಂದರಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಆದಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡದಲ್ಲಿ ಮೊಸಳೆ ಕಾಣಿಸಿಕೊಂಡಿದೆ.
Discussion about this post