ಕನ್ನಡ ಕಿರುತೆರೆಯ ಹಾಟ್ ಸೀರಿಯಲ್ ಎಂದೇ ಬಣ್ಣಿಸಲಾಗಿರುವ ಮಂಗಳಗೌರಿ (mangala gowri maduve) ಮದುವೆ ಧಾರವಾಹಿ ಮುಕ್ತಾಯವಾಗಲಿದೆ ಅನ್ನುವ ಸುದ್ದಿಗಳು ಹರಡಿತ್ತು.
1800 ಎಪಿಸೋಡ್ ಗಳನ್ನು ಪೂರೈಸಿರುವ ಧಾರವಾಹಿ ಕೆಲವೇ ದಿನಗಳಲ್ಲಿ ಅಂತ್ಯ ಕಾಣಲಿದೆ. ಬಿಗ್ ಬಾಸ್ ಪ್ರಾರಂಭವಾಗುವ ಹೊತ್ತಿಗೆ ಧಾರವಾಹಿಯನ್ನು (mangala gowri maduve) ಮುಕ್ತಾಯಗೊಳಿಸಲಾಗುತ್ತಿದೆ ಅನ್ನಲಾಗಿತ್ತು.
ಆದರೆ ಈ ಬಗ್ಗೆ ಧಾರಾವಾಹಿ ನಿರ್ದೇಶಕ, ರಾಮ್ ಜೀಯನ್ನು ಟೈಂಸ್ ಆಫ್ ಇಂಡಿಯಾ ಪತ್ರಿಕೆ ಮಾತನಾಡಿಸಿದ್ದು, ಧಾರಾವಾಹಿ ಅಂತ್ಯಗೊಳ್ಳುತ್ತಿರುವ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
Also Read : Sonu gowda ವೈರಲ್ ವಿಡಿಯೋ ರಹಸ್ಯ : ಬಿಗ್ ಬಾಸ್ ಮನೆಯಲ್ಲಿ iphone 12 ಕಥೆ
ಮಂಗಳಗೌರಿ ಧಾರಾವಾಹಿ ಅಂತ್ಯಗೊಳ್ಳುತ್ತಿರುವ ಬಗ್ಗೆ ನನಗೇನು ಗೊತ್ತಿಲ್ಲ. ಈ ಬಗ್ಗೆ ವಾಹಿನಿ ಮತ್ತು ಧಾರಾವಾಹಿ ನಿರ್ಮಾಣ ಸಂಸ್ಥೆಯಲ್ಲಿ ಯಾವುದೇ ಅಧಿಕೃತ ಚರ್ಚೆಗಳು ನಡೆದಿಲ್ಲ. ಅಧಿಕೃತ ಚರ್ಚೆ ನಡೆಯದಿರುವ ಕಾರಣ ಮಂಗಳ ಗೌರಿ ಧಾರಾವಾಹಿ ಅಂತ್ಯವಾಗಲಿದೆ ಅನ್ನುವುದರಲ್ಲಿ ಅರ್ಥವಿಲ್ಲ.
ನನಗೂ ಮಂಗಳ ಗೌರಿ ಅಂತ್ಯವಾಗುತ್ತಿದೆ ಅನ್ನುವ ಸುದ್ದಿ ಗೊತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಇದು ಬರೀ ರೂಮರ್ ಎಂದಷ್ಟೇ ನಾನು ಸ್ಪಷ್ಟನೆ ಕೊಡಬಲ್ಲೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಸಾಕಷ್ಟು ವೀಕ್ಷಕರಿಗೆ ಮಂಗಳ ಗೌರಿ ಧಾರಾವಾಹಿ ಮುಕ್ತಾಯವಾಗೋದಿಲ್ಲ ಬೇಕಿಲ್ಲ. ಹೀಗಿರುವಾಗ ಜನ ಎಲ್ಲಿ ತನಕ ನಮಗೆ ಅಶೀರ್ವಾದ ಮಾಡುತ್ತಾರೋ ಅಲ್ಲಿಯ ತನಕ ಮಂಗಳ ಗೌರಿ ಧಾರವಾಹಿ ಮುಂದುವರಿಯಲಿದೆ ಅಂದಿದ್ದಾರೆ. ಅಂದ್ರೆ ಎಲ್ಲಿ ತನಕ ಧಾರಾವಾಹಿಗೆ ಟಿಆರ್ಪಿ ಬರುತ್ತಿರುತ್ತದೋ ಅಲ್ಲಿ ತನಕ ಧಾರಾವಾಹಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ರಾಮ್ ಜೀ ಹೇಳಿದ್ದಾರೆ ಅಂದಾಯ್ತು.
Discussion about this post