5 ವರ್ಷಗಳ ಹಿಂದೆ ಈ ವಿಗ್ರಹವನ್ನು ( mandya balaji idol) ಮಂಡ್ಯದ ದೇವಾಲಯದಿಂದ ಕಳ್ಳತನ ಮಾಡಲಾಗಿತ್ತು
ತಮಿಳುನಾಡು : ಐದು ವರ್ಷಗಳ ಹಿಂದೆ ಮಂಡ್ಯದ ದೇಗುಲವೊಂದರ ಅರ್ಚಕನೇ ತಾನೇ ಪೂಜೆ ಮಾಡುತ್ತಿದ್ದ ವಿಗ್ರಹವನ್ನು ಕದ್ದು ಮಾರಾಟ ಮಾಡಿದ್ದ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. ಮಂಡ್ಯದ ದೇಗುಲದಿಂದ ಕಳುವಾಗಿದ್ದ ವಿಗ್ರಹವನ್ನು ತಮಿಳುನಾಡು ಪೊಲೀಸರು 5 ವರ್ಷಗಳ ಬಳಿಕ ವಶಪಡಿಸಿಕೊಂಡಿದ್ದಾರೆ.( mandya balaji idol)
ಮಂಡ್ಯದ ದೇಗುಲದ ಅರ್ಚಕರೊಬ್ಬರು ತಮಗೆ ಹಣಕಾಸಿನ ಮುಗ್ಗಟ್ಟು ಇದೆ ಅನ್ನುವ ಕಾರಣದಿಂದ 2017ರಲ್ಲಿ ವಿಗ್ರಹವನ್ನು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂ ನಟರಾಜ್ ಅನ್ನುವ ವಕೀಲರಿಗೆ ಮಾರಾಟ ಮಾಡಿದ್ದರು. ನಟರಾಜ್ ಈ ವಿಗ್ರಹವನ್ನು ತಮಿಳುನಾಡಿಗೆ ಒಯ್ಯುವ ವೇಳೆ ಕರ್ನಾಟಕ ಗಡಿಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿತ್ತು. ( mandya balaji idol)
ಆದರೆ ವಕೀಲ ನಕಲಿ ದಾಖಲೆ ಸೃಷ್ಟಿಸಿ ಪ್ರಕರಣದಿಂದ ಪಾರಾಗಿದ್ದು ಮಾತ್ರವಲ್ಲದೆ, ವಿಗ್ರಹವನ್ನು ತಮ್ಮ ವಶಕ್ಕೆ ಪಡೆದಿದ್ದರು. ಇದಾದ ಬಳಿಕ ತಮಿಳುನಾಡಿನಲ್ಲಿ 50 ಕೋಟಿ ರೂಪಾಯಿಗೆ ವಿಗ್ರಹ ಮಾರಾಟ ಮಾಡಲು ಪ್ರಯತ್ನಿಸಿದ್ದರು. ದುಬಾರಿ ದರ ಎಂದು ಯಾರೊಬ್ಬರೂ ಮುಂದೆ ಬರಲಿಲ್ಲ. ಖರೀದಿದಾರರ ಹುಡುಕಾಟ ಸಲುವಾಗಿ ತನ್ನ ಜೊತೆಯ ಕಿರಿಯ ವಕೀಲ ಪಳನಿಸ್ವಾಮಿ ನೆರವು ಕೋರಿದ ನಟರಾಜ್ ವಿಗ್ರಹ ಮಾರಿದರೆ ನಿಮಗೂ ಲಾಭ ಕೊಡುತ್ತೇನೆ ಅಂದಿದ್ದರು. ಈ ನಡುವೆ 2018ರಲ್ಲಿ ನಟರಾಜ್ ದಿಢೀರ್ ಎಂದು ಮೃತಪಟ್ಟರು. ಕಿರಿಯ ವಕೀಲ ಪಳನಿಸ್ವಾಮಿ ವಿಗ್ರಹ ದರವನ್ನು 33 ಕೋಟಿಗೆ ಇಳಿಸಿ ಮಾರಾಟಕ್ಕೆ ಯತ್ನಿಸಿದರು.
ಇದನ್ನೂ ಓದಿ : facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…?
ಇತ್ತೀಚೆಗೆ ಈ ಬಗ್ಗೆ ವಿಷಯ ತಿಳಿದ ತಮಿಳುನಾಡು ಸಿಐಡಿ ಪೊಲೀಸರು ಮಾರುವೇಷದಲ್ಲಿ ವಿಗ್ರಹ ಖರೀದಿಗೆ ಮುಂದಾದ್ರು. ಪಳನಿಸ್ವಾಮಿ ಮನೆಗೆ ತೆರಳಿ ವಿಗ್ರಹ ಪರಿಶೀಲನೆ ನಡೆಸಿ ಬಂದಿದ್ದರು. ಈ ವೇಳೆ ಹಲವು ಸುತ್ತಿನ ಚರ್ಚೆಯ ಬಳಿಕ ಕೊನೆಗೆ 15 ಕೋಟಿಗೆ ವಿಗ್ರಹ ಖರೀದಿಗೆ ತೀರ್ಮಾನವಾಗಿತ್ತು. ಅದರಂತೆ ಮಾರನೇ ದಿನ ದುಡ್ಡಿನೊಂದಿಗೆ ಬರೋದಾಗಿ ಹೇಳಿದ ಪೊಲೀಸರು ಮರು ದಿನ ಬಂದು ಪಳನಿಸ್ವಾಮಿ ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ.
Discussion about this post