ಹೊಸದಾಗಿ ಮದುವೆಯಾಗಿ ಮೊದಲ ಆಷಾಢದ ಸಂಭ್ರಮದಲ್ಲಿರುವ ಮಗಳಿಗೆ ಆಂಧ್ರ ಪ್ರದೇಶದ ಮೂಲದ ವ್ಯಕ್ತಿಯೊಬ್ಬರು ಭರ್ಜರಿ ಉಡುಗೊರೆ ಕಳುಹಿಸಿ ವೈರಲ್ ಆಗಿದ್ದಾರೆ.
ದಕ್ಷಿಣ ಭಾರತದ ರಾಜ್ಯದ ಕೆಲ ಸಮುದಾಯಗಳಲ್ಲಿ ಆಷಾಢ ಮಾಸದಲ್ಲಿ ಉಡುಗೊರೆ ಕಳುಹಿಸಿಸುವುದು ಸಂಪ್ರದಾಯ. ಅದೇ ರೀತಿ ರಾಜಮಂಡ್ರಿಯ ಉದ್ಯಮಿ ಬಲರಾಮ ಕೃಷ್ಣ ತಮ್ಮ ಮಗಳು ಪ್ರತ್ಯೂಷಾಳಿಗೆ ವಿಶೇಷ ಉಡುಗೊರೆ ಕಳುಹಿಸಿದ್ದಾರೆ.
ಏನು ಅಂತೀರಾ ಆ ಉಡುಗೊರೆ, ಸಾವಿರ ಕೆಜಿ ಮೀನು, ಸಾವಿರ ಕೆಜಿ ತರ್ಕಾರಿ, 250 ಕೆಜಿ ಸಿಗಡಿ, 250 ಕೆಜಿ ದಿನಸಿ ಸಾಮಾನು, 250 ಡಬ್ಬಿ ಉಪ್ಪಿನ ಕಾಯಿ, 250 ಕೆಜಿ ಸಿಹಿ ತಿನಿಸು, 50 ಕೆಜಿ ಕೋಳಿ, 10 ಆಡುಗಳನ್ನು ಕಳುಹಿಸಿದ್ದಾರೆ.
ಆಂಧ್ರದ ರಾಜಮಂಡ್ರಿಯ ಉದ್ಯಮಿ ಬಲರಾಮ ಕೃಷ್ಣ ಅವರ ಮಗಳ ವಿವಾಹ ಪುದುಚೇರಿಯ ಪವನ್ ಕುಮಾರ್ ಅವರೊಂದಿಗೆ ನಡೆದಿತ್ತು. ಮಗಳು ಹಾಗೂ ಅಳಿಯನ ಮೊದಲ ಆಷಾಢ ವಿಶೇಷವಾಗಿರಿಸಲು ಬಲರಾಮ ಕೃಷ್ಣ ಈ ಉಡುಗೊರೆಗಳನ್ನು ನೀಡಿದ್ದಾರೆ.
ಅಳಿಯಂದಿರ ನಿವಾಸಕ್ಕೆ ಟ್ರಕ್ ನಲ್ಲಿ ಈ ಉಡುಗೊರೆಗಳನ್ನು ಸಾಗಿಸಲಾಗಿದ್ದು, ಟ್ರಕ್ ಅನ್ ಲೋಡ್ ಆಗುತ್ತಿದ್ದಂತೆ ಪ್ರತ್ಯೂಷಾ ಹಾಗೂ ಪವನ್ ಕುಮಾರ್ ಶಾಕ್ ಆಗಿದ್ದಾರೆ.
Discussion about this post