ದೇಶದ ಪ್ರಧಾನಿಯನ್ನು ಟೀಕಿಸಿದ ಭಾರತವನ್ನೇ ಹಂಗಿಸಿದವರ ಬಗ್ಗೆ ಇವರಿಗ್ಯಾಕೆ ಕರುಣೆ – boycott maldives
ಲಕ್ಷದ್ವೀಪಕ್ಕೆ ಭೇಟಿ ನೀಡುವ ಮೂಲಕ ಮಾಲ್ಡೀವ್ಸ್ ವಿರುದ್ಧ ಪ್ರಧಾನಿ ಮೋದಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಲಕ್ಷದ್ವೀಪ ಕೂಡಾ ಪರ್ಯಾಯವಾಗಬಹುದು ಅನ್ನುವ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಕೊಟ್ಟಿದ್ದರು. ( boycott maldives )
ಯಾವಾಗ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ವಿಡಿಯೋ ವೈರಲ್ ಆಯ್ತೋ, ಸಹಜವಾಗಿಯೇ ಮೋದಿ ವಿರೋಧಿಗಳು ಉರಿದು ಬಿದ್ದಿದ್ದಾರೆ. ಈ ಭೇಟಿಯ ಹಿಂದೆ ಮಾಲ್ಡೀವ್ಸ್ ಗೆ ತಿರುಗೇಟು ನೀಡೋ ಉದ್ಧೇಶ ಯಾರಿಗೂ ಗೊತ್ತಿರಲಿಲ್ಲ.
Read This : 21 ಕಿಮೀ ಉದ್ಧದ ಸೇತುವೆ ದಾಟಲು 250 ರೂ ಶುಲ್ಕ
ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ನ ಮೂವರು ಸಚಿವರು ನಾಲಗೆ ಹರಿ ಬಿಟ್ಟಿದ್ದಾರೆ. ಮೋದಿ ಜೋಕರ್, ಇಸ್ರೇಲ್ ಕೈಗೊಂಬೆ, ಲಕ್ಷದ್ವೀಪದಲ್ಲಿ ಕೊಳಚಗೇರಿಗಳಿದೆ ಅನ್ನೋ ಅರ್ಥದಲ್ಲಿ ಮಾತನಾಡಿದ್ದರು.
ಯಾವಾಗ ದೇಶದ ಪ್ರಧಾನಿ ವಿರುದ್ಧ ಚೀನಾದ ಹೊಸ ಸ್ನೇಹಿತ ಮಾಲ್ಡೀವ್ಸ್ ಟೀಕೆ ಮಾಡಿತೋ, ದೇಶ ಪ್ರೇಮಿಗಳು ತಿರುಗಿ ಬಿದ್ರು. ಆಗ್ಲೇ ಶುರುವಾಯ್ತು ಬಾಯ್ಕಾಟ್ ಮಾಲ್ಡೀವ್ಸ್. ( boycott maldives ) ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಈ ಅಭಿಯಾನದ ಬೆನ್ನಿಗೆ ನಿಂತರು. ನಮ್ಮ ದೇಶ ನಮ್ಮ ಹೆಮ್ಮೆ ಎಂದು ಸಾರಿದರು.
![boycott maldives](https://torrentspree.com/wp-content/uploads/2024/01/modi-lakshadweep-1.jpg)
ಬಾಯ್ಕಾಟ್ ಮಾಲ್ಡೀವ್ಸ್ ಅನ್ನೋದು ಯಾವಾಗ ವೈರಲ್ ಆಯ್ತೋ, ಮಾಲ್ಡೀವ್ಸ್ ಸರ್ಕಾರಕ್ಕೆ ತಪ್ಪಿನ ಅರಿವಾಯ್ತು. ಉಹಯ ದೇಶಗಳ ನಡುವೆ ಭಿಕ್ಕಟ್ಟು ಸೃಷ್ಟಿಸೋ ಹೇಳಿಕೆ ನೀಡಿದ ಮೂವರು ಉಪ ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಮನೆಗೆ ಕಳುಹಿಸಿದೆ. ಮಾರಿಯಂ ಶಿಯುನಾ, ಮಲ್ಸಾ ಷರೀಫ್, ಹಾಗೂ ಮಝೂಂ ಮಜೀದ್ ಭಾರತ ವಿರೋಧಿ ಹೇಳಿಕೆ ಕೊಟ್ಟ ಕರ್ಮಕ್ಕೆ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
![boycott maldives](https://torrentspree.com/wp-content/uploads/2024/01/modi-lakshadweep.jpg)
ಇಷ್ಟೆಲ್ಲಾ ಬೆಳವಣಿಗೆ ಸಂಭವಿಸಿದ್ರು, ಕನ್ನಡದ ಸೆಲೆಬ್ರೆಟಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಸೆಲೆಬ್ರೆಟಿ ಅನ್ನಿಸಿಕೊಂಡ ಕಾರಣಕ್ಕೆ ಜವಾಬ್ದಾರಿ ಇದೆ ಅನ್ನುವುದನ್ನೇ ಮರೆತ ಅವರು ಸಂಡೇ ಮೂಡ್ ಗೆ ಜಾರಿದ್ದಾರೆ. ದೇಶವನ್ನು ಟೀಕಿಸಿದ ಮೌಲ್ಡೀವ್ಸ್ ಗೆ ಬಿಸಿ ಮುಟ್ಟಿಸಬೇಕು ಎಂದು ಅವರಿಗೆ ಅನ್ನಿಸಿಯೇ ಇಲ್ಲ. ಹತ್ತಾರು ಬಾರಿ ಮಾಲ್ಡೀವ್ಸ್ ಪ್ರವಾಸ ಹೋಗಿ ಬಂದ ಸೆಲೆಬ್ರೆಟಿಗಳ ಮೌನ ನೋಡಿದ್ರೆ ಅವರ ಬಗ್ಗೆಯೇ ಅಸಹನೆ ಹುಟ್ಟುವುದಂತು ಪಕ್ಕಾ.
![maldives suspends 3 ministers over derogatory remark against pm modi](https://torrentspree.com/wp-content/uploads/2024/01/maldives-suspends-3-ministers-over-derogatory-remark-against-pm-modi.jpg)
Discussion about this post