ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿ ಅರ್ವಿಯಾ ಮದುವೆ ಮುಂಚೆಯೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ಕಲರ್ಸ್ ವಾಹಿನಿಯ ಅನುಬಂಧ ಆವಾರ್ಡ್ಸ್ ಕಾರ್ಯಕ್ರಮದಲ್ಲಿ ಜೊತೆಗೆ ಹೆಜ್ಜೆ ಹಾಕಿದ್ದ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು.
ಇದು ಕ್ಯಾಮಾರ ಮುಂದೆ ನಡೆದ ಕಾರ್ಯಕ್ರಮವಾದರೆ, ಕ್ಯಾಮಾರ ಕಣ್ಣಿಗೆ ಬೀಳದ ಜೋಡಿ ಸಿಕ್ಕಾಪಟ್ಟೆ ಸುತ್ತಾಡುತ್ತಿದೆಯಂತೆ. ಈ ನಡುವೆ ಮಹೇಂದ್ರ XUV 700 ಕಾರಿನ ರೇಸ್ ನಲ್ಲಿ ಪಾಲ್ಗೊಂಡಿರುವ ಅರವಿಂದ್ ದಿವ್ಯಾ ಅವರನ್ನೂ ಕರೆದುಕೊಂಡು ಹೋಗಿದ್ದಾರೆ.

ವಿಶೇಷ ಅನುಮತಿಯೊಂದಿಗೆ ಅರವಿಂದ್ ಓಡಿಸುತ್ತಿದ್ದ ಕಾರಿನಲ್ಲೇ ಸಹ ಚಾಲಕಿಯಾಗಿ ಪ್ರಯಾಣಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದಿವ್ಯಾ, ಗಂಟೆಗೆ 200 ಕಿಮೀ ಓಡುವ ಕಾರಿನಲ್ಲಿ ಜೀವನದಲ್ಲಿ ಕೂತಿಲ್ಲ. ಚಾಲಕನ ಕೌಶಲ್ಯದ ಬಗ್ಗೆ ನಂಬಿಕೆ ಇದ್ರೆ ಅದು ಸೂಪರ್ ಆಗಿರುತ್ತದೆ. ಈ ರಾಷ್ಟ್ರೀಯ ದಾಖಲೆಯ ಈವೆಂಟ್ ನಲ್ಲಿ ಪಾಲ್ಗೊಳ್ಳುವುದು ಸೂಪರ್ ಥ್ರಿಲ್ ಆಗಿತ್ತು ಅಂದಿದ್ದಾರೆ.
ಇನ್ನು ಈ ಬಗ್ಗೆ ಅರವಿಂದ್ ಕೂಡಾ ಇನ್ಸ್ಟಾ ದಲ್ಲಿ ಪೋಸ್ಟ್ ಹಾಕಿದ್ದು, ಭವಿಷ್ಯದ ಪತ್ನಿಯ ಜೊತೆಗಿನ ಕ್ಷಣಗಳನ್ನು ಸಂಭ್ರಮಿಸಿದ್ದಾರೆ.
Discussion about this post