ಮಹಾರಾಷ್ಟ್ರ : ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕೆಲ ಕಂಪನಿಗಳ ಎಲೆಕ್ಟ್ರಾನಿಕ್ ಸ್ಕೂಟರ್ ಸಂಪೂರ್ಣವಾಗಿ ಕೈ ಕೊಟ್ಟಿದೆ. ಇಂಧನ ದರ ಏರಿಕೆಯ ನಡುವೆ ಸ್ಕೂಟರ್ ಖರೀದಿಸಿದ ಮಂದಿ ಇದೀಗ ಪರಿತಪಿಸುವಂತಾಗಿದೆ. ಹಲವು ಕಂಪನಿಗಳ ಸ್ಕೂಟರ್ ಗೆ ಬೆಂಕಿ ಬೀಳಲಾರಂಭಿಸಿದ್ದು, ಸವಾರರು ಆತಂಕ ಪಡುವಂತಾಗಿದೆ.
ಈ ನಡುವೆ ಖರೀದಿಸಿದ ಒಂದು ವಾರದೊಳಗೆ ಓಲಾ ಇ ಸ್ಕೂಟರ್ ಕೈ ಕೊಟ್ಟಿದ್ದಕ್ಕೆ ಆಕ್ರೋಶಗೊಂಡಿರುವ ವ್ಯಕ್ತಿಯೊಬ್ಬರು ಓಲಾ ವಾಹನಕ್ಕೆ ಕತ್ತೆಯನ್ನು ಕಟ್ಟಿ, ಕತ್ತೆ ಮೂಲಕ ಸ್ಕೂಟರ್ ಎಳೆಯಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಮಹಾರಾಷ್ಟ್ರ ಬೀಡ್ ಜಿಲ್ಲೆಯ ಸಚಿನ್ ಗಿಟ್ಟೆ ಅನ್ನುವವರು ಕಳೆದ ವಾರ ಓಲಾ ಇ ಸ್ಕೂಟರ್ ಖರೀದಿಸಿದ್ದರು. ಒಂದಿಷ್ಟು ದಿನ ಚೆನ್ನಾಗಿದ್ದ ಸ್ಕೂಟರ್ ಪದೇ ಪದೇ ಕೈ ಕೊಡಲಾರಂಭಿಸಿದೆ. ಖರೀದಿಸಿದ ಒಂದು ವಾರದೊಳಗೆ ಸ್ಕೂಟರ್ ಕೈ ಕೊಟ್ಟಿದೆ. ಕಂಪನಿಯ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದ್ರೆ ಪರಿಹಾರ ಸಿಗಲಿಲ್ಲ. ಹೀಗಾಗಿ ಓಲಾ ಕಂಪನಿಗೆ ಪಾಠ ಕಲಿಸಲು ಮುಂದಾದ ಸಚಿನ್, ವಾಹನಕ್ಕೆ ಕತ್ತೆ ಕಟ್ಟಿ ಎಳೆಸಿದ್ದಾರೆ. ಈ ಮೂಲಕ ಓಲಾ ಕಂಪನಿಯ ಮಾನ ಹರಾಜು ಹಾಕಿದ್ದಾರೆ.
ಇನ್ನು ಓಲಾ ಸ್ಕೂಟರ್ ಒಂದಕ್ಕೆ ಇತ್ತೀಚೆಗೆ ಬೆಂಕಿ ತಗುಲಿತ್ತು. ಈ ಹಿನ್ನಲೆಯಲ್ಲಿ 1441 ವಾಹನಗಳನ್ನು ಓಲಾ ಹಿಂಪಡೆದಿದೆ.
Discussion about this post