ಹುದ್ದೆ ಒಲ್ಲೆ ಎಂದಿದ್ದ ದೇವೇಂದ್ರ ಫಡ್ನವೀಸ್ ಮನವೊಲಿಸಲು ಪ್ರಧಾನಿ ನರೇಂದ್ರ ಮೋದಿ ಎರಡು ಸಲ ಫೋನ್ ಕರೆ ಮಾಡಿದ್ದರಂತೆ
ಮಹಾರಾಷ್ಟ್ರ : ಉದ್ಧವ್ ಠಾಕ್ರೆ ಪತನವಾದ ಬಳಿಕ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗ್ತಾರೆ ಅನ್ನಲಾಗಿತ್ತು. ಕೊನೆಯ ಕ್ಷಣದವರೆಗೂ ಬಿಜೆಪಿಯವರೇ ಮುಖ್ಯಮಂತ್ರಿ ಶಿವಸೇನೆಯಲ್ಲಿ ಬಂಡಾಯವೆದ್ದ ಏಕನಾಥ ಶಿಂಧೆ ಉಪಮುಖ್ಯಮಂತ್ರಿ ಅನ್ನಲಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಗಿದ್ದು, ಏಕನಾಥ ಶಿಂಧೆ ಮುಖ್ಯಮಂತ್ರಿಯಾದರು. ಫಡ್ನವೀಸ್ ಉಪಮುಖ್ಯಮಂತ್ರಿಯಾದರು. ಅದಕ್ಕೂ ಮುನ್ನ ಮಾತನಾಡಿದ್ದ ದೇವೇಂದ್ರ ಫಡ್ನವೀಸ್ ನಾನು ಈ ಸರ್ಕಾರದ ಭಾಗವಾಗಿರೋದಿಲ್ಲ ಅಂದದ್ದರು. ಅಚ್ಚರಿ ಅನ್ನುವಂತೆ ಅವರು ರಾತ್ರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೊನೆಯ ಕ್ಷಣದಲ್ಲಿ ದೇವೇಂದ್ರ ಫಡ್ನವೀಸ್ ಮನಸ್ಸು ಬದಲಾಯಿಸಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವಿದೆ ಅನ್ನುವುದು ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡು ಸಲ ಕರೆ ಮಾಡಿ ಉಪಮುಖ್ಯಮಂತ್ರಿಯಾಗಲು ಒಪ್ಪಿಸಿದ್ದರು ಅನ್ನುವ ಮಾಹಿತಿ ಹೊರ ಬಿದ್ದಿದೆ.
ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಹಾರಾಷ್ಟ್ರದ ನೂತನ ಸರ್ಕಾರದ ಭಾಗವಾಗಲು ಒತ್ತಡ ಹೇರಿದ್ದರಂತೆ. ಆಗ ಅದಕ್ಕೆ ದೇವೇಂದ್ರ ಫಡ್ನವೀಸ್ ಒಪ್ಪಿರಲಿಲ್ಲ. ಮೋದಿಯ ಕರೆ ಬಳಿಕ ಅವರು ಮನಸ್ಸು ಬದಲಾಯಿಸಿದ್ದಾರೆ ಅನ್ನಲಾಗಿದೆ.
Discussion about this post