ಮ.ರಾಮಮೂರ್ತಿಯವರ ಪತ್ನಿ ವಿಷಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆದುಕೊಂಡ ರೀತಿ ನಿಜಕ್ಕೂ ಅಸಹ್ಯವೇ ಸರಿ ( Ma ramamurthy)
ಬೆಂಗಳೂರು : ‘ಮ.ರಾಮಮೂರ್ತಿ ಅವರು ಚಳವಳಿಗೆ ಸಂಬಂಧಿಸಿದ ಹಾಗೆ ನನ್ನ ಹೀರೊ. ಕನ್ನಡದ ಹಳದಿ, ಕೆಂಪು ಬಾವುಟ ಅವರದೇ ಕೊಡುಗೆ. ರಾಮಮೂರ್ತಿ ಅವರ ಹೋರಾಟದ ರೀತಿ, ಕೆಚ್ಚು, ಕೊಡುಗೆಗಳನ್ನು ಅರಿತವರು ಯಾರೇ ಇದ್ದರೂ ಇಂತಹ ಅಸೂಕ್ಷ್ಮ ಪತ್ರ ಬರೆಯುತ್ತಿರಲಿಲ್ಲ. ಕೋಟಿ ಕೋಟಿ ಹಣ ಮನೆಯಲ್ಲಿಟ್ಟ ಮಂದಿಗೆ ಅವರ ಒಂದು ಹೊತ್ತಿನ ತಿಂಡಿ ಖರ್ಚಿಗೂ ಸಮವಲ್ಲದ ಜೀವನೋಪಾಯ ನೀಡಲು ಆಗುವುದಿಲ್ಲವೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿರಲಾರದು.. ಇರಲಿ ಬಿಡಿ.. ಆ ತಾಯಿ ಒಪ್ಪಿದರೆ ಅವರ ಜೀವನೋಪಾಯದ ಖರ್ಚುಗಳನ್ನು ಇನ್ನು ಮೇಲೆ ನಾನೇ ನೋಡಿಕೊಳ್ಳುವೆ’ ಎಂದು ‘ವೀರಲೋಕ ಪುಸ್ತಕ ಪ್ರಪಂಚ’ದ ವೀರಕಪುತ್ರ ಶ್ರೀನಿವಾಸ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ( Ma ramamurthy)
ಇದನ್ನು ಓದಿ : PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್
ಹೀಗೆ ಶ್ರೀನಿವಾಸ್ ಬರೆಯಲು ಕಾರಣವಿದೆ. ಕನ್ನಡ ಬಾವುಟ ರೂಪಿಸಿದ ಎಂ.ರಾಮಮೂರ್ತಿ ( Ma ramamurthy)ಅವರ ಪತ್ನಿ ಕಮಲಮ್ಮ ಅವರು ರಾಮಕೃಷ್ಣಾಶ್ರಮದ ಶಾರದಾ ಕುಟೀರದಲ್ಲಿ ಆಶ್ರಯ ಪಡೆದಿದ್ದು, ವಯಸ್ಸಾದ ಕಾರಣಕ್ಕೆ ಅವರು ಓಡಾಡುವ ಸ್ಥಿತಿಯಲ್ಲಿ ಇಲ್ಲ. ಅವರಿಗೆ ಸಹಾಯಕರನ್ನು ನೇಮಿಸುವಂತೆ ಕನ್ನಡ ಗೆಳೆಯರ ಬಳಗ ಮನವಿ ಮಾಡಿತ್ತು. ಜೊತೆಗೆ ವೃದ್ಧಾಪ್ಯ ವೇತನ ಕೊಡಿಸಿ ಅಂದಿತ್ತು. ಆದರೆ ಬೊಮ್ಮಾಯಿ ಸರ್ಕಾರದ ಅಧಿಕಾರಿಗಳಿಗೆ ಅದರಲ್ಲೂ ಕಾರ್ಕಳ ಸುನಿಲ್ ಕುಮಾರ್ ಮುನ್ನಡೆಸುತ್ತಿರುವ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಮ.ರಾಮಮೂರ್ತಿ ಅಂದ್ರೆ ಯಾರೆಂದು ಗೊತ್ತಿರಬೇಕಲ್ವ. ಹೀಗಾಗಿ ಹಾಗೆಲ್ಲಾ ನಿಮ್ಮ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ ಎಂದು ನಿರ್ದೇಶಕರು ಸಹಿ ಮಾಡಿದ್ದಾರೆ.
ಇದು ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಣ್ಣು ಮಾರುವ ಸಂತನಿಗೆ ವಿವೇಚನೆಯಿಲ್ಲದೇ ನೂರು ಕೋಟಿ ಕೊಡುವ ಸರ್ಕಾರ, ಓಟು ರಾಜಕಾರಣಕ್ಕೆ ಸ್ವಾಭಿಮಾನ ಅಡವಿಟ್ಟು ಕಟ್ಟುತ್ತಿರುವ ಮರಾಠ ಭವನಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಧಿಕ್ಕಾರ ಅಂದಿದ್ದಾರೆ ಹಲವಾರು ಮಂದಿ.
ಕನ್ನಡಿಗರಿಗೆ ಹಳದಿ ಮತ್ತು ಕೆಂಪು ಬಾವುಟ ನೀಡಿದ ಕನ್ನಡ ಸೇನಾನಿ ಮ.ರಾಮಮೂರ್ತಿ ಇವರ ಶ್ರೀಮತಿ ಕಮಲಮ್ಮ ರಾಮಮೂರ್ತಿ ರವರು ಅನಾಥಾಶ್ರಮದಲ್ಲಿ ಇದ್ದಾರೆ.ಇವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದಾಗ ಸರ್ಕಾರದ ಸಹಾಯಕ್ಕಾಗಿ ಮನವಿ ಮಾಡಿದ್ದರೆ,ಕರ್ನಾಟಕ ಸರ್ಕಾರದ ಉತ್ತರ ನೋಡಿ @CMofKarnataka@karkalasunil 1/2 pic.twitter.com/aZaP21Rhc8
— ಗುರುದೇವ್ ನಾರಾಯಣಕುಮಾರ್(ಜಿನಾಕು Jr) (@Gurudevnk16) December 26, 2022
ಇದೇ ವಿಷಯಕ್ಕೆ ಸಂಬಂಧಿಸಿದಂತೆ ವೀರಲೋಕದ ಶ್ರೀನಿವಾಸ್, ಸರ್ಕಾರಕ್ಕೆ ಅಸಾಧ್ಯವಾದರೆ ನಾನೇ ನೋಡಿಕೊಳ್ಳುತ್ತೇನೆ ಅಂದಿದ್ದಾರೆ.
Discussion about this post