Lunar Eclipse 2023 ( ಚಂದ್ರ ಗ್ರಹಣ ) ಹೊತ್ತನಲ್ಲಿ ಎಡವಟ್ಟು ಮಾಡಿಕೊಂಡ್ರೆ
ಈ ವರ್ಷದ ಕೊನೆಯ ಚಂದ್ರಗ್ರಹಣ ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸಲಿದೆ. ಅಕ್ಟೋಬರ್ 28ರ ಶನಿವಾರ ರಾತ್ರಿ 1:04ಕ್ಕೆಗ್ರಹಣ ಆರಂಭವಾಗಲಿದ್ದು, ಸ್ಪರ್ಶ ಕಾಲ ಅನ್ನಿಸಿಕೊಳ್ಳಲಿದೆ 1.44ಕ್ಕೆ ಗ್ರಹಣದ ಮಧ್ಯ ಕಾಲವಾಗಿದ್ದು, 29ರ ಮಧ್ಯರಾತ್ರಿ 2:24ಕ್ಕೆ ಗ್ರಹಣ ಮುಕ್ತಾಯಗೊಳ್ಳಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗ್ರಹಣದ ಸಮಯದಲ್ಲಿ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳಲಿವೆ. ಗ್ರಹಣ ಕಾಲದಲ್ಲಿ ಚಂದ್ರನು ಮೇಷ ರಾಶಿಯಲ್ಲಿವ ಕಾರಣ ಗುರು ಮತ್ತು ಚಂದ್ರರು ಸೇರಿ ಮೇಷದಲ್ಲಿ ಗಜಕೇಸರಿ ಯೋಗವನ್ನು ರೂಪಿಸುತ್ತಾರೆ ಅನ್ನಲಾಗಿದೆ.
ಇನ್ನು ಗ್ರಹಣದ ಆಚರಣೆ ಕುರಿತಂತೆ ಜ್ಯೋತಿಷ್ಯರು ಸಲಹೆಗಳನ್ನು ನೀಡಿದ್ದು , ಅಕ್ಟೋಬರ್ 28ರ ಮಧ್ಯಾಹ್ನ 3 ಗಂಟೆಯ ತನಕ ಭೋಜನ ಸೇವಿಸಬಹುದಾಗಿದೆ. ಸಂಜೆ ಮೂರು ಗಂಟೆಯ ನಂತರ ಆಹಾರ ಸೇವನೆಗೆ ಶಾಸ್ತ್ರ ಪ್ರಕಾರ ಅವಕಾಶ ಇರೋದಿಲ್ಲ ಅನ್ನುವುದು ಕೆಲವರ ಸಲಹೆಯಾದರೆ ಮತ್ತೆ ಕೆಲವರು ಗ್ರಹಣ ಆರಂಭಕ್ಕೂ 3 ಗಂಟೆ ಮುಂಚೆ ಲಘು ಸಸ್ಯಹಾರವನ್ನು ಸೇವಿಸಬೇಕು. ಮಾಂಸಹಾರ ಸೇವಿಸಿದ್ರೆ ಬೇಗ ಜೀರ್ಣವಾಗದ ಕಾರಣ ಸಸ್ಯಹಾರ ಸೇವನೆಗೆ ಸೂಚಿಸಲಾಗಿದೆ. ಇನ್ನು ಆಹಾರ ತಿನ್ನುವುದು ಹಕ್ಕು ಎಂದು ವಾದಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಇನ್ನು ವಯೋವೃದ್ಧರು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯ ಪೀಡಿತರು, ಚಿಕ್ಕಮಕ್ಕಳು ರಾತ್ರಿ 9 ರಿಂದ 10 ಗಂಟೆಯ ಒಳಗಾಗಿ ಆಹಾರವನ್ನು ಸೇವಿಸಬಹುದಾಗಿದೆ. ಸಾಧ್ಯವಾದಷ್ಟು ಸೂರ್ಯಾಸ್ತದೊಳಗೆ ಆಹಾರ ಸೇವನೆ ಮುಗಿಸೋದು ಸೂಕ್ತವಂತೆ. ಸಕ್ಕರೆ ಕಾಯಿಲೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ವೈದ್ಯರ ಸಲಹೆಯಂತೆ ಆಹಾರವನ್ನು ಸೇವಿಸಲು ಶಾಸ್ತ್ರ ಅನುವು ಮಾಡಿಕೊಟ್ಟಿದೆ.
ಗ್ರಹಣದ ಕುರಿತಂತೆ ಆಸ್ತಿಕರಿಗೆ ಸೂಚನೆ
- ಗ್ರಹಣ ಕಾಲದಲ್ಲಿ ನಿದ್ದೆ ನಿಷಿದ್ಧ, ಗ್ರಹಣ ಹೊತ್ತಿನಲ್ಲಿ ಹೊರಗಡೆ ತಿರುಗಾಡುವಂತಿಲ್ಲ
- ಗ್ರಹಣ ಹೊತ್ತಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡೋ ಹಾಗಿಲ್ಲ
- ಆದಿ ಮಧ್ಯ ಮತ್ತು ಅಂತ್ಯ ಕಾಲದಲ್ಲಿ ಮೂರು ಸ್ನಾನಗಳನ್ನು ಮಾಡಬೇಕು
- ಗ್ರಹಣ ಹೊತ್ತಿನಲ್ಲಿ ಜಪ ತಪಗಳನ್ನು ಆಚರಿಸಬೇಕು.
- ಹಣಕಾಸಿನ ತೊಂದರೆ ಇರುವವರು ಲಕ್ಷ್ಮಿಯ ಆರಾಧನೆ
- ಆರೋಗ್ಯದ ಸಮಸ್ಯೆ ಇರುವವರು ಈಶ್ವನಲ ಆರಾಧನೆ,
- ಶತ್ರು ಭಾಧೆ ಇರುವವರು ದುರ್ಗಾರಾಧನೆ ಕೈಗೊಳ್ಳಬಹುದು
- ಇದರೊಂದಿಗೆ ಮನೆ ದೇವರು ಹಾಗೂ ಇಷ್ಟ ದೇವರ ಪ್ರಾರ್ಥನೆಯನ್ನೂ ಸೂಚಿಸಲಾಗಿದೆ.
- 29ನೇ ತಾರೀಖು ಬೆಳಗ್ಗೆ ಸ್ನಾನ ಮುಗಿಸಿ ಆಹಾರ ಸೇವಿಸಬೇಕು
- ರಾತ್ರಿ ಮಿಕ್ಕಿದ ಆಹಾರವನ್ನು ಮರು ದಿನ ಸೇವಿಸಬೇಡಿ
ಗ್ರಹಣ ಕಾಲದಲ್ಲಿ ಪಠಿಸಬೇಕಾದ ಮಂತ್ರ ಹೀಗಿದೆ
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷ ವಾಹನಃ । ಚಂದ್ರಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ । ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ॥
ಗ್ರಹಣ ಮುಗಿದ ಮರು ದಿನ ಅಕ್ಕಿ, ಭತ್ತ ಮತ್ತು ಉದ್ದಿನ ಬೇಳೆಯನ್ನು ದಾನ ಮಾಡೋದು ಸೂಕ್ತ, ಚಂದ್ರ ಬಿಂಬ ದಾನ, ಚಂದ್ರನ ರತ್ನಧಾರಣೆಯಿಂದಲೂ ಗ್ರಹಣದಿಂದ ಪ್ರಭಾವದಿಂದ ಪಾರಾಗಬಹುದಾಗಿದೆ.
ಇದನ್ನೂ ಓದಿ : Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ
ಗ್ರಹಣದ ಪ್ರಭಾವದ ಅವಧಿ
ಒಂದು ಮಂಡಲ ಅಂದ್ರೆ 45 ದಿನಗಳ ಕಾಲ ಚಂದ್ರ ಗ್ರಹಣದ ಪ್ರಭಾವವಿರುತ್ತದೆ. ಅದರಲ್ಲೂ ಶನಿವಾರ ರಾತ್ರಿ 11.32 ರಿಂದ 29ನೇ ತಾರೀಖು ಬೆಳಗಿನ ಜಾವ 3.56ರವರೆಗೆ ಗ್ರಹಣದ ಪ್ರಭಾವ ಪ್ರಬಲವಾಗಿರಲಿದ್ದು, ಚಂದ್ರಗ್ರಹಣದ ಪ್ರಭಾವ ಪ್ರಪಂಚದ ಮೇಲೆ 3 ತಿಂಗಳ ಕಾಲ ಇರಲಿದೆ. ಜನ್ಮ ರಾಶಿಗಳ ಮೇಲೆ 15 ರಿಂದ 20 ದಿನಗಳ ಕಾಲ ಚಂದ್ರ ಗ್ರಹಣದ ಪ್ರಭಾವ ಇರಲಿದೆ.
Discussion about this post