Lokayukta ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕಾಸಿಲ್ಲ ಅಂದ್ರೆ ಕೆಲಸವಾಗೋದಿಲ್ಲ… ಅಧಿಕಾರಿ ಹೊಟ್ಟೆಗೆ ಅದೇನೂ ತಿಂತಾರೋ ಗೊತ್ತಿಲ್ಲ
ಬೆಂಗಳೂರು : ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲು ಲಂಚ ಪಡೆಯುವಾಗ ಕೆಲವೇ ತಿಂಗಳ ಹಿಂದೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದ ಅಧಿಕಾರಿ ಎರಡು ತಿಂಗಳ ಬಳಿಕ ಮತ್ತೆ ಲಂಚ ಪಡೆಯುವಾಗ ಲೋಕಾಯುಕ್ತ ( Lokayukta ) ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇಷ್ಟೊಂದು ಲಂಚ ದಾಹವಿದೆ ಅಂದ್ರೆ ಇವನು ಮತ್ತು ಇವನ ಮನೆಯವರು ಹೊಟ್ಟೆಗೆ ಏನ್ ತಿಂತರೋ ಗೊತ್ತಿಲ್ಲ.
ಬೆಸ್ಕಾಂ ಬಿಳೇಕಳ್ಳಿ ಉಪ ವಿಭಾಗದ ಸಹಾಯಕ ಎಂಜಿನಿಯರ್ ಎನ್ ನಾಗರಾಜ್ ಎರಡು ತಿಂಗಳ ಹಿಂದೆ ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಜೈಲು ಸೇರಿದ್ದ ಲಂಚಕೋರ ಅಧಿಕಾರಿ ಜಾಮೀನು ಪಡೆದು ಮತ್ತೆ ಚಾಳಿ ಮುಂದುವರಿಸಿದ್ದ.
Read More : Bengaluru potholes : ಕಣ್ಣಿದ್ದೂ ಕುರುಡಾದ ಬೊಮ್ಮಾಯಿ ಸರ್ಕಾರ : 2 ವರ್ಷದಲ್ಲಿ ರಸ್ತೆ ಗುಂಡಿಗೆ 11 ಬಲಿ
ಬೇಗೂರು ಕೋಡಿಚಿಕ್ಕಹಳ್ಳಿಯ ಗ್ರಾಮದ ಅಬ್ದುಲ್ ರಹೀಮ್ ಎಂಬವರು ಬಹುಮಹಡಿ ಕಟ್ಟಡ ನಿರ್ಮಿಸಿದ್ದರು. ಇದಕ್ಕೆ 37 ಕಿಲೋವ್ಯಾಟ್ ವಿದ್ಯುತ್ ಮಂಜೂರಾತಿಗಾಗಿ ಗುತ್ತಿಗೆದಾರ ಎಚ್.ಎಸ್. ಕುಮಾರ್ ಮನವಿ ಸಲ್ಲಿಸಿದ್ದರು. ಆದರೆ ಇದಕ್ಕೆ ಒಪ್ಪಿಗೆ ನೀಡಲು ನಾಗರಾಜ್ 50 ಸಾವಿರ ರೂಪಾಯಿ ಕೊಡಿ ಅಂದಿದ್ದ.ಈ ಡೀಲ್ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡಿದ್ಜ ಗುತ್ತಿಗೆದಾರರು ನೇರವಾಗಿ ಲೋಕಾಯುಕ್ತ ( Lokayukta) ಬಾಗಿಲು ಬಡಿದಿದ್ದಾರೆ.ಈ ಹಿನ್ನಲೆಯಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಕಾರ್ಯಾಚರಣೆ ನಡೆಸಿದ ಎಸ್ಪಿ ಅಶೋಕ್ ಕುಮಾರ್ ನೇತೃತ್ವದ ತಂಡ ಲಂಚ ಬಾಕ ನಾಗರಾಜ್ ನನ್ನು ಬಂಧಿಸಿದೆ.
ಮಜಾ ಏನ್ ಗೊತ್ತಾ, ಈ ಲಂಚ ಬಾಕ ಅಧಿಕಾರಿಯನ್ನು ಈ ಮೊದಲು ಎಸಿಬಿಯಲ್ಲಿ ಇದ್ದ ವೇಳೆಯೂ ಡಿವೈಎಸ್ಪಿ ಅಂಥೋನಿಯವರೇ ಬಂಧಿಸಿದ್ದರು. ಎಸಿಬಿ ರದ್ದುಗೊಂಡು ಲೋಕಾಯುಕ್ತ ಚುರುಕುಗೊಂಡ ಬಳಿಕ ಡಿವೈಎಸ್ಪಿ ಅಂಥೋನಿ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದರು. ಆಗ್ಲೂ ನಾಗರಾಜ್ ನನ್ನು ಇದೇ ಡಿವೈಎಸ್ಪಿ ಬಂಧಿಸಿದ್ದಾರೆ.
ಇಂಧನ ಸಚಿವ ಸುನಿಲ್ ಕುಮಾರ್ ಈ ಲಂಚ ಬಾಕ ನಾಗರಾಜ್ ನನ್ನು ಶಾಶ್ವತವಾಗಿ ಮನೆಗೆ ಕಳುಹಿಸದೇ ಹೋದ್ರೆ, ಮತ್ತೆ ಜಾಮೀನು ಪಡೆದು ಜೈಲಿನಿಂದ ಬಂದು ತಿಂದು ತೇಗುವ ಕೆಲಸಕ್ಕೆ ಕೈ ಹಾಕೋದು ಗ್ಯಾರಂಟಿ.
Discussion about this post