ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ( Bengaluru potholes)
ಬೆಂಗಳೂರು : ರಾಜ್ಯದಲ್ಲಿ ರಸ್ತೆಗಿಳಿದ ಮೇಲೆ ಮನೆಗೆ ಹಿಂತಿರುಗಿ ಬರುವ ಅದ್ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಕಳಪೆ ಕಾಮಗಾರಿಯ ಕರ್ಮಕ್ಕೆ ರಸ್ತೆಗಳು ಗುಂಡಿ ( Bengaluru potholes) ಬಿದ್ದಿವೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ರಸ್ತೆ ಗುಂಡಿ ಬೀಳಲು ಮಳೆ ಕಾರಣ ಅನ್ನುತ್ತಿದ್ದಾರೆ.) ಹಾಗೇ ನೋಡಿದರೆ ವಿದೇಶದಲ್ಲೂ ಸಾಕಷ್ಟು ಮಳೆ ಬಂದಿದೆ. ಬೆಂಗಳೂರಿನ ರಸ್ತೆಯಲ್ಲಿರುವಷ್ಟು ಗುಂಡಿ ಭಾರತಕ್ಕೆ ಸರಿ ಸಮಾನವಾದ ಅದ್ಯಾವ ರಾಷ್ಟ್ರದ ರಸ್ತೆಗಳಲ್ಲೂ ಇಲ್ಲ.
ಈ ನಡುವೆ ಬಿಬಿಎಂಪಿ ನಿರ್ಲಕ್ಷ್ಯದಿಂದ ಕಳೆದ 5 ವರ್ಷಗಳಲ್ಲಿ ಅಂದ್ರೆ 2017 ರಿಂದ 2020ರ ತನಕ 17 ಅಪಘಾತಗಳು ಕಳಪೆ ರಸ್ತೆ ಮತ್ತು ಗುಂಡಿಗಳಿಂದ ಸಂಭವಿಸಿದೆ. ಇನ್ನು ಕಳೆದ ಎರಡು ವರ್ಷದಲ್ಲಿ 11 ಮಂದಿ ರಸ್ತೆ ಗುಂಡಿಯ ( Bengaluru potholes) ಕಾರಣದಿಂದ ಬೆಂಗಳೂರಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 2017ರಿಂದ 2020ರ ಅವಧಿಯಲ್ಲಿ 5 ಮಂದಿ ರಸ್ತೆ ಗುಂಡಿಯ ಕಾರಣದಿಂದ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ 2021ರಲ್ಲಿ 7 ಮಂದಿಯನ್ನು ಬಿಬಿಎಂಪಿ ನಿರ್ಮಿತ ರಸ್ತೆ ಗುಂಡಿಗಳು ಕೊಲೆ ಮಾಡಿವೆ. 2022ರಲ್ಲಿ ಈಗಾಗಲೇ 4 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ : Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ
ಕಾನೂನು ಪ್ರಕಾರ ರಸ್ತೆ ಗುಂಡಿಗೆ ( Bengaluru potholes) ಬಲಿಯಾದವರ ಕುಟುಂಬಕ್ಕೆ ಬಿಬಿಎಂಪಿ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ನಮಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಕುಂಡೆ ಬಿಸಿ ಮಾಡಿಕೊಂಡು ಕಚೇರಿಯಲ್ಲೇ ಕೂತಿದ್ದಾರೆ. ಹೋಗ್ಲಿ ರಸ್ತೆ ಗುಂಡಿಗೆ ಬಿದ್ದು ಸತ್ರೆ ಪರಿಹಾರ ಕೊಡುವ ವ್ಯವಸ್ಥೆ ಉಂಟು ಅನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೂ ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ.
ಇದನ್ನೂ ಓದಿ : Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರಿದಿದೆ ಅಂದ್ರೆ ಅದಕ್ಕೆ ಸಿಎಂ ಬೊಮ್ಮಾಯಿಯವರ ನಿರ್ಲಕ್ಷ್ಯವೇ ಕಾರಣ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಜನರ ಜೀವದ ಬಗ್ಗೆ ಅವರಿಗೆ ಕಾಳಜಿ ಇರುತ್ತಿದ್ರೆ ರಸ್ತೆ ಗುಂಡಿಗೊಂದು ಶಾಶ್ವತ ಪರಿಹಾರವಾದ್ರೂ ಕಂಡುಕೊಳ್ಳಬಹುದಿತ್ತು.
Discussion about this post