ಇವಿಎಂ ಕುರಿತಂತೆ ಇರುವ ಗೊಂದಲ ಬಗೆ ಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹಿಂದೆ ಚುನಾವಣಾ ಆಯೋಗವೇ ಬನ್ನಿ ಪರೀಕ್ಷೆ ಮಾಡಿ ಎಂದು ಆಹ್ವಾನ ಕೊಟ್ಟ ವೇಳೆ ಸುಮ್ಮನಿದ್ದ ರಾಜಕೀಯ ಪಕ್ಷಗಳು, ಇದೀಗ ದೇಶದಲ್ಲಿ ಮೂರು ಹಂತಗಳ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ತಗಾದೆ ತೆಗೆದಿದೆ.
ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ 21 ವಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಶೇ 50 ರಷ್ಟು ವಿವಿ ಪ್ಯಾಟ್ ಬಳಸಲಾಗಿರುವ ಇವಿಎಂಗಳನ್ನು ಪರೀಕ್ಷೆ ಮಾಡಲು ಚುನಾವಣಾ ಆಯೋಗಕ್ಕೆ ಸಲಹೆ ನೀಡುವ ಮೂಲಕ ಮತ ಎಣಿಕೆ ಯಲ್ಲಿ ಪಾರದರ್ಶಕತೆ ತೋರಬೇಕು ಎಂದು ಕೋರ್ಟ್ಗೆ ಮನವಿ ಮಾಡಿವೆ.
ಟಿಡಿಪಿ, ಎನ್ಸಿಪಿ, ಟಿಎಂಸಿ, ಡಿಎಂಕೆ, ಆಪ್, ಸಿಪಿಐ(ಎಂ), ಸಿಪಿಐ ಸೇರಿ 21 ಪಕ್ಷಗಳು ಈ ಕುರಿತು ಕೋರ್ಟ್ಗೆ ಮನವಿ ಮಾಡಿವೆ.
Discussion about this post