ಇತ್ತೀಚಿನ ದಿನಗಳಲ್ಲಿ ನಡೆಯಬಾರದ ಘಟನೆಗಳು ಜಗತ್ತಿನಲ್ಲಿ ಘಟಿಸುತ್ತಿದೆ. ವಿಜ್ಞಾನಿಗಳೇ ಬೆಚ್ಚಿ ಬೀಳುವ, ವೈದ್ಯರೇ ಗಾಬರಿಗೊಳ್ಳುವ ಪ್ರಕರಣಗಳು ವರದಿಯಾಗುತ್ತಿದೆ.
ಇರಾಕ್ ನ ಡುಹೋಕ್ ನಗರದ ದಂಪತಿ ತಮ್ಮ ಮೂರು ತಿಂಗಳ ಮಗುವಿನ ವೃಷಣಕೋಶ ಊದಿದೆ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಪರೀಕ್ಷೆ ನಡೆಸಿದಾಗ ಗಾಬರಿ ಬೀಳುವ ಸರದಿ ವೈದ್ಯರಾಗಿತ್ತು. ಯಾಕಂದ್ರೆ ಆ ಮಗು ಮೂರು ಶಿಶ್ನಗಳನ್ನು ಹೊಂದಿತ್ತು.
ಇದಾದ ನಂತರ ಅಂತರರಾಷ್ಟ್ರೀಯ ಮಟ್ಟದ ವೈದ್ಯರನ್ನು ಸಂಪರ್ಕಿಸಿದ ವೈದ್ಯರು ಈ ಅಪರೂಪದ ಪ್ರಕರಣದ ಕುರಿತಂತೆ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ಮುಖ್ಯ ಶಿಶ್ನವೊಂದನ್ನು ಹೊರತು ಪಡಿಸಿ ಉಳಿದೆರಡು ಶಿಶ್ನಗಳನ್ನು ಸರ್ಜರಿ ಮೂಲಕ ತೆಗೆದು ಹಾಕಿದ್ದಾರೆ. ತೆಗೆದು ಹಾಕಿರುವ ಶಿಶ್ನಗಳಿಗೆ ಮೂತ್ರನಾಳದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ನಡೆಸಲು ಸುಲಭವಾಯ್ತು ಅನ್ನುತ್ತಾರೆ ವೈದ್ಯರು.
ಈ ನಡುವೆ ವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ಶಿಶ್ನವುಳ್ಳ ಮಗು ಇರಾಕ್ ನಲ್ಲಿ ಜನಿಸಿದೆ.
Discussion about this post