ರಾಜ್ಯದಲ್ಲಿ ಪ್ರವಾಹದಿಂದ ಜನ ಕಂಗೆಟ್ಟಿದ್ದಾರೆ. ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಿಲ್ಲ. ಈ ನಡುವೆ ಆನೆಯಿಂದ ನಾಲೆ ಹಾಕಿಸಿಕೊಂಡು ಸಚಿವರಿಬ್ಬರು ಮಿಂಚಿದ್ದಾರೆ. ಹೀಗೆ ಅನೆಯಿಂದ ಮಾಲೆ ಹಾಕಿಸಿಕೊಳ್ಳುವುದು ವನ್ಯಜೀವಿ ಕಾಯ್ದೆ ಪ್ರಕಾರ ಸರಿಯೇ..? Laxman savadi
ಬೆಳಗಾವಿ : ಸಚಿವ ಜೆಸಿ ಮಾಧುಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಆನೆಯಿಂದ ಮಾಲೆ ಹಾಕಿಸಿಕೊಂಡು ಮಿಂಚಿದ್ದಾರೆ.Laxman savadi
ಬೆಳಗಾವಿಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಗುದ್ದಲಿ ಪೂಜೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಮಾಧುಸ್ವಾಮಿ ಆನೆಯಿಂದ ಮಾಲಾರ್ಪಣೆ ಮಾಡಿಸಿಕೊಂಡಿದ್ದಾರೆ.
ಈ ಕೆರೆ ತುಂಬಿಸುವ ಕಾರ್ಯಕ್ರಮದಿಂದ ಸುಟ್ಟಟ್ಟಿ – ಯಲ್ಲಮವಾಡಿ, ಕೊಹಳ್ಳಿ – ಐಗಳಿ, ಅಡಹಳ್ಳಿ – ಅಡಹಳಟ್ಟಿ, ಬಾಡಗಿ – ಅರಟಾಳ, ಫಡತರವಾಡಿ – ತೆಲಸಂಗ ಮತ್ತು ಕೊಕಟನೂರ ಗ್ರಾಮದ ರೈತರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ : Urfi Javed -ನಮ್ಮ ಕಣ್ಣುಗಳನ್ನು ದಾನ ಮಾಡಲು ರೆಡಿಯಾಗಿದ್ದೇವೆ : ಉರ್ಫಿಯ ಹೊಸ ಅವತಾರ ಕಂಡವರ ಮಾತು
black fever – kala-azar : ಪಶ್ಚಿಮ ಬಂಗಾಳದಲ್ಲಿ ಕಪ್ಪು ಜ್ವರದ ಕಾಟ : 11 ಜಿಲ್ಲೆಗಳು ಕಂಗಾಲು
ಕೊರೋನಾ ಸೋಂಕಿನ ಬೆನ್ನಲ್ಲೇ ಭಾರತದಲ್ಲಿ ಮಂಕಿ ಪಾಕ್ಸ್ ಸೇರಿದಂತೆ ಅಪರೂಪದ ರೋಗಗಳು ಕಾಡಲಾರಂಭಿಸಿದೆ. ಜೊತೆಗೆ ಡೆಂಘೀ ಮಲೇರಿಯಾ ಕೂಡಾ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಕಪ್ಪು ಜ್ವರದ ( black fever – kala-azar )ಕಾಟ ಶುರುವಾಗಿದೆ.
ಕೊಲ್ಕತ್ತಾ : ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಪಶ್ಚಿಮ ಬಂಗಾಳ ಸರ್ಕಾರ ಇದೀಗ ಮತ್ತೊಂದು ರೋಗವನ್ನು ನಿಯಂತ್ರಿಸಬೇಕಾದ ಒತ್ತಡದಲ್ಲಿದೆ. ಕಳೆದ ಎರಡು ವಾರಗಳಲ್ಲಿ ಪಶ್ಚಿಮ ಬಂಗಾಳದ 11 ಜಿಲ್ಲೆಗಳಲ್ಲಿ ಕಪ್ಪು ಜ್ವರ ಅಥವಾ ಕಾಲಾ ಅಜರ್ ( black fever – kala-azar ) ವ್ಯಾಪಕವಾಗಿ ಹರಡುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನೇ ಈ ರೋಗ ಟಾರ್ಗೇಟ್ ಮಾಡಿರುವುದು ತಲೆ ನೋವು ಹುಟ್ಟಿಸಿದೆ. ಅಧ್ಯಯನದ ಪ್ರಕಾರ ಬಡ ವರ್ಗದ ಮಂದಿಗೆ ಈ ರೋಗ ಬೇಗ ಹರಡುತ್ತದೆ. ಬಡವರು ಅನ್ನುವ ಕಾರಣಕ್ಕೆ ಜ್ವರ ಕಾಣಿಸಿಕೊಳ್ಳುವುದಿಲ್ಲ. ಬಡವರಲ್ಲಿ ಅಪೌಷ್ಟಿಕತೆ ಕೊರತೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
11 ಜಿಲ್ಲೆಗಳಲ್ಲಿ 65 ಜನರಿಗೆ ಈ ಜ್ವರ ಬಂದಿರುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ. ರಾಜ್ಯ ಆರೋಗ್ಯ ಇಲಾಖೆ ಕೂಡಾ ಈ ರೋಗ ನಿಯಂತ್ರಣಕ್ಕೆ ಪಣ ತೊಟ್ಟಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಏನಿದು ಕಪ್ಪು ಜ್ವರ
ಇದು ನೊಣಗಳ ಕಡಿತದಿಂದ ಹರಡುವ ರೋಗವಾಗಿದ್ದು, ಅನಿಯಮಿತ ಜ್ವರ, ತೂಕ ಇಳಿಕೆ, ಯಕೃತಿನ ಹಿಗ್ಗುವಿಕೆ, ರಕ್ತ ಹೀನತೆ ಈ ರೋಗದ ಪ್ರಮುಖ ಲಕ್ಷಣ. ಈ ಜ್ವರಕ್ಕೆ ಚಿಕಿತ್ಸೆ ನೀಡದೇ ಹೋದ್ರೆ ಮಾರಣಾಂತಿಕವಾಗುತ್ತದೆ. ಸರಿಯಾದ ಸಮಯಕ್ಕೆ ಟ್ರೀಟ್ ಮೆಂಟ್ ಕೊಟ್ರೆ ರೋಗಿಯನ್ನು ಉಳಿಸಿಕೊಳ್ಳಬಹುದಾಗಿದೆ.
ಬ್ರೆಜಿಲ್, ಪೂರ್ವ ಆಫ್ರಿಕಾ ಬಿಟ್ಟರೆ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಜ್ವರ ಕಾಣಿಸಿಕೊಂಡಿದೆ. ಡಾರ್ಜಿಲಿಂಗ್, ಮಾಲ್ಡಾ, ಉತ್ತರ ದಿನಾಜ್ ಫುರ್, ಕಾಲಿಂಪಂಗ್ ಜಿಲ್ಲೆಗಳಲ್ಲಿ ಈ ಹಿಂದೆ ಈ ಜ್ವರ ಕಾಣಿಸಿಕೊಂಡಿತ್ತು. ಇದೀಗ ಮೊದಲ ಪಶ್ಚಿಮಬಂಗಾಳದಲ್ಲಿ ಈ ಜ್ವರ ಕಾಣಿಸಿಕೊಂಡಿದೆ.
ಇದನ್ನೂ ಓದಿ : theft arrest : ಕಳ್ಳ ಪತಿ : ಪತ್ನಿ ಅತ್ತೆಯಿಂದ ಮಾಲು ವಿಲೇವಾರಿ : ಕಳ್ಳರ ಕುಟುಂಬ
Discussion about this post