ಆಂಧ್ರಪ್ರದೇಶ : ಚೈನಾ ವೈರಸ್ ನಿಂದ ಕಂಗಲಾಗಿರುವ ಇಡೀ ವಿಶ್ವ, ಸೋಂಕು ನಿವಾರಣೆ ಸಲುವಾಗಿ ನಿದ್ದೆಗೆಟ್ಟು ಕೆಲಸ ಮಾಡುತ್ತಿದೆ. ಒಂದು ಹಂತದಲ್ಲಿ ಲಸಿಕೆಯನ್ನು ಕಂಡು ಹಿಡಿಯಲಾಗಿದೆಯಾದರೂ ಅದು ಸೋಂಕು ಹಿಮ್ಮೆಟ್ಟಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ.
ಈ ನಡುವೆ ಆಂಧ್ರದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಂ ಅನ್ನುವ ಗ್ರಾಮದಲ್ಲಿ ತಾನು ಕೊರೋನಾ ಸೋಂಕು ನಿವಾರಣೆ ಸಲುವಾಗಿ ಆರ್ಯುವೇದ ಮದ್ದು ಕಂಡು ಹಿಡಿದಿರುವುದಾಗಿ ಹೇಳಿದ್ದು, ಮದ್ದು ಹಾಗೂ ಕಣ್ಣಿನ ಡ್ರಾಪ್ ಗಳನ್ನು ವಿತರಿಸುತ್ತಿದ್ದಾರೆ.
ಹಲವಾರು ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು ಇತ್ತೀಚೆಗೆ ಆನಂದಯ್ಯ ಕೊಡುತ್ತಿರುವ ಚಿಕಿತ್ಸೆ ಸಿಕ್ಕಾಪಟ್ಟೆ ಪ್ರಚಾರಗಿಟ್ಟಿಸಿಕೊಂಡಿದೆ. ಹೀಗಾಗಿ ಶುಕ್ರವಾರ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಮಂದಿ ಆನಂದಯ್ಯ ಇರುವ ಹಳ್ಳಿಗೆ ಆಗಮಿಸಿದ್ದಾರೆ. ಏಕಾಏಕಿ ಜನ ನುಗ್ಗಿ ಬಂದ ಕಾರಣ ಕೊರೋನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಸೋಂಕಿತರು, ಶಂಕಿತ ಸೋಂಕಿತರ, ಆರೋಗ್ಯವಂತರು ಎಲ್ಲಾರೂ ಒಂದೇ ಕಡೆ ಸೇರಿದ ಕಾರಣ ಇದೀಗ ಹಳ್ಳಿಯೇ ಕೊರೋನಾ ಹಾಟ್ ಸ್ಪಾಟ್ ಆಗುವ ಆತಂಕ ಸೃಷ್ಟಿಯಾಗಿದೆ.
ಅಚ್ಚರಿ ಅಂದ್ರೆ ಈವರೆಗೆ ಆನಂದಯ್ಯ ಅವರಿಂದ ಮದ್ದು ಪಡೆದ ಯಾರೊಬ್ಬರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ. ಯಾವಾಗ ಹಳ್ಳಿಗೆ ಜನ ಸಾಗರೋಪಾದಿಯಲ್ಲಿ ಹರಿದು ಬಂದರೋ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಜ್ಞರೊಂದಿಗೆ ಸ್ಥಳಕ್ಕೆ ದೌಡಾಯಿಸಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲೇ ಮದ್ದು ತಯಾರಿಕೆ ನಡೆಯುತ್ತಿತ್ತು. ಅವುಗಳನ್ನು ಪರೀಕ್ಷಿಸಿರುವ ತಜ್ಞರು ಇದರಿಂದ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಆಕ್ಸಿಜನ್ ಕಡಿಮೆ ಇದ್ದ ವ್ಯಕ್ತಿಯೊಬ್ಬರು ಇವರ ಮದ್ದು ಸೇವಿಸಿದ ಕೆಲವೇ ಗಂಟೆಗಳಲ್ಲಿ ಆಕ್ಸಿಜನ್ ಪ್ರಮಾಣ 92ಕ್ಕೆ ಏರಿದೆ ಎಂದು ಸ್ಥಳೀಯ ವೈದ್ಯರೊಬ್ಬರು ದೃಢಪಡಿಸಿದ್ದಾರೆ.
ಆನಂದಯ್ಯ ಕೊಡುತ್ತಿರುವ ಮದ್ದಿಗೆ ಸ್ಥಳದಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕರೂ ಮುಂಜಾಗ್ರತ ಕ್ರಮವಾಗಿ ಮುಂದಿನ ಆದೇಶದ ತನಕ ಮದ್ದು ವಿತರಿಸಿದಂತೆ ಜಿಲ್ಲಾಡಳಿತ ಆದೇಶಿಸಿದೆ. ಜೊತೆಗೆ ಇದೇ ಜಿಲ್ಲೆಯವರಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆನಂದಯ್ಯ ಅವರ ಚಮತ್ಕಾರಿ ಮದ್ದಿನ ಕುರಿತಂತೆ ಸಂಪೂರ್ಣ ವರದಿ ನೀಡುವಂತೆ ಕೇಂದ್ರ ಆಯುಷ್ ಖಾತೆ ಸಚಿವ ಕಿರಣ್ ರಿಜಿಜು ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕ ಬಲರಾಂ ಭಾರ್ಗವ ಅವರಿಗೆ ಸೂಚಿಸಿದ್ದಾರೆ.
ಇದೀಗ ಜಿಲ್ಲಾಡಳಿತ ಆನಂದಯ್ಯ ಅವರು ತಯಾರಿಸಿದ್ದ ಮದ್ದನ್ನು ಹೈದರಬಾದ್ ನ ಆಯುಷ್ ಪ್ರಯೋಗಲಾಯಕ್ಕೆ ಕಳುಹಿಸಿಲಾಗಿದೆ. ಜೊತೆಗೆ ಸಿಎಂ ಜಗನ್ ಕೂಡಾ ವರದಿ ನೀಡುವಂತೆ ಆದೇಶಿಸಿದ್ದಾರೆ.
Discussion about this post