ಕೋಲಾರ : ಕೊರೋನಾ ಆತಂಕದ ನಡುವೆಯೇ SSLC ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮೊದಲ ದಿನದ ಪರೀಕ್ಷೆಯಲ್ಲಿ ಸಹಜ ಗೊಂದಲಗಳನ್ನು ಹೊರತುಪಡಿಸಿದ್ರೆ ಸುಸೂತ್ರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಿಂ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ನಡುವೆ ಕೋಲಾರದಲ್ಲಿ 55 ವರ್ಷದ ಪೊಲೀಸ್ ಪೇದೆಯೊಬ್ಬರು SSLC ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ಕೋಲಾರ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಬಂದ ಕುರುಬರ ಪೇಟೆ ನಿವಾಸಿ ಮಂಜುನಾಥ್ ಯಾವುದೇ ಮುಜುಗರವಿಲ್ಲದೆ ವಿದ್ಯಾರ್ಥಿಗ ಜೊತೆಗೆ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದರು.
1993ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡಿರುವ ಇವರು ಪ್ರಸ್ತುತ ಬೆಂಗಳೂರಿನ, ಕೋರಮಂಗಲ ಸಶಸ್ತ್ರ ಮೀಸಲು ಪಡೆಯಲ್ಲಿ ಪೇದೆ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಮೋಷನ್ ನಿರೀಕ್ಷೆಯಲ್ಲಿದ್ದಾರೆ. ಬಡ್ತಿಗಾಗಿ SSLC ಪಾಸ್ ಆಗಿರಬೇಕು ಅನ್ನುವ ನಿಯಮವಿದೆ. ಹೀಗಾಗಿ ಮಂಜುನಾಥ್ ಪರೀಕ್ಷೆ ಬರೆದಿದ್ದಾರೆ.
ಅಂದ ಹಾಗೇ ಇವರು SSLC ಪಾಸ್ ಮಾಡುವ ಪ್ರಯತ್ನವನ್ನು ಕಳೆದ ವರ್ಷವೇ ಪ್ರಾರಂಭಿಸಿದ್ದು, ಮೊದಲ ಪ್ರಯತ್ನದಲ್ಲಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು 4 ವಿಷಯಗಳು ಬಾಕಿ ಉಳಿದಿದ್ದು, ಅದರಲ್ಲಿ ಈ ವರ್ಷ ಉರ್ತೀರ್ಣರಾಗಿರುವ ಗುರಿ ಇಟ್ಟುಕೊಂಡಿದ್ದಾರೆ.
ಕನ್ನಡ, ಇಂಗ್ಲೀಷ್, ಗಣಿತ ಪರೀಕ್ಷೆಯನ್ನು ಪೇದೆ ಮಂಜುನಾಥ್ ಬರೆಯುತ್ತಿದ್ದಾರೆ. ಈಗಾಗಲೇ ವಿಜ್ಞಾನ, ಹಿಂದಿ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಯನ್ನು ಮಂಜುನಾಥ್ ಪಾಸ್ ಮಾಡಿದ್ದಾರೆ.
Discussion about this post