ಬೆಂಗಳೂರು : ಅಚ್ಛೆ ದಿನ್ ಬರಲಿದೆ ಅನ್ನುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ದರ ಏರಿಕೆಯ ಬಂಪರ್ ಗಿಫ್ಟ್ ನೀಡುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ದರ ಗಗನ ಮುಖಿಯಾಗಿದ್ದು, ಖಾಸಗಿ ವಲಯದಲ್ಲಿ ಅದರಲ್ಲೂ ಅಂದಿನ ತುತ್ತಿಗಾಗಿ ಅಂದಿನ ಸಂಬಳವನ್ನೇ ನಂಬಿರುವ ಮಂದಿ ಕಂಗಲಾಗಿದ್ದಾರೆ. ಸರ್ಕಾರಿ ನೌಕರರಿಗೆ ಮಾತ್ರ ಈ ದರ ಏರಿಕೆಯ ಬಿಸಿ ತಟ್ಟೋದಿಲ್ಲ.
ಗ್ಯಾಸ್ ಹಾಗೂ ಪೆಟ್ರೋಲ್, ಡಿಸೇಲ್ ದರ ಏರಿಕೆಯೇ ಎಲ್ಲಾ ವಸ್ತುಗಳ ದರ ಏರಿಕೆಗೆ ಮೂಲ ಕಾರಣವಾಗಿದೆ. ಇದೀಗ ಹಾಲಿನ ದರ ಏರಿಕೆಯ ಕಾಲವೂ ಕೂಡಿ ಬಂದಿದೆ. ನಂದಿನಿ ಹಾಲಿನ ದರವನ್ನು ಏರಿಸಬೇಕು ಅನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. KMF ಇಂತಹುದೊಂದು ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟು ಹಲವು ತಿಂಗಳೇ ಕಳೆದಿದೆ. ರಾಜಕೀಯ ಕಾರಣಗಳಿಂದ ಈ ಪ್ರಸ್ತಾಪಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಲ್ಲ.
ಹೀಗಾಗಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ರೂ.3 ಹೆಚ್ಚಿಸಲುಗಿ ರಾಜ್ಯ ಸರ್ಕಾರ ಅನುಮತಿಗಾಗಿ ಕೆಎಂಎಫ್ ಕಾದು ಕುಳಿತಿದೆ. ಆದರೆ ರಾಜ್ಯ ಸರ್ಕಾರದಿಂದ ಅನುಮತಿ ದೊರೆಯದಿರುವ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿರ್ಧರಿಸಿದ್ದಾರೆ.
ಬೆಂಗಳೂರು ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ : ತಪ್ಪಿದ ಭಾರೀ ಅನಾಹುತ
ಬೆಂಗಳೂರು : ರಾಜಧಾನಿಯ ಶಾಪಿಂಗ್ ಮಾಲ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಶಾಪಿಂಗ್ ಮಾಲ್‌ನಲ್ಲಿ ಯಾವುದೇ ಜನರು, ಸಿಬ್ಬಂದಿ ಇರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಕೆರೆ ಗೇಟ್ ಬಳಿಯಿರುವ ಶಾಪಿಂಗ್ ಮಾಲ್‌ನಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಈ ವೇಳೆ ಬೆಂಕಿ ಕೆನ್ನಾಲೆ ಅಬ್ಬರ ಹೆಚ್ಚಾದ ಕಾರಣ ಸ್ಥಳಕ್ಕೆ, 6 ಆಗ್ನಿಶಾಮಕ ವಾಹನ ತರಿಸಿಕೊಳ್ಳಲಾಗಿದೆ.
ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
Discussion about this post