ಬಿಗ್ ಬಾಸ್ ( Bigg Boss OTT ) ಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಹುಟ್ಟುವ ಲಕ್ಷಣ ಗೋಚರಿಸುತ್ತಿದೆ ಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಹುಟ್ಟುವ ಲಕ್ಷಣ ಗೋಚರಿಸುತ್ತಿದೆ
ಬಿಗ್ ಬಾಸ್ ( Bigg Boss OTT )ಮನೆಯಲ್ಲಿ ಸಾನ್ಯಾ ಅಯ್ಯರ್ ಮತ್ತು ನಟ ರೂಪೇಶ್ ಶೆಟ್ಟಿ ನಡುವೆ ನಂಟು ಬೆಳೆಸಲು ಸಹ ಸ್ಪರ್ಧಿಗಳು ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಸಾನಿಯಾ ಪ್ರೀತಿಯಲ್ಲಿ ಬೀಳುವಂತಿದೆ. ಆದರೆ ರೂಪೇಶ್ ಶೆಟ್ಟಿಗೊಂದು ಗುರಿ ಇದೆ, ಹೀಗಾಗಿ ಮನೆ ಮಂದಿಯ ಬ್ರೋಕರ್ ಕೆಲಸ WorkOut ಆಗುತ್ತಿಲ್ಲ.
ಈ ನಡುವೆ ಬಿಗ್ ಬಾಸ್ ಮನೆಯ ಜಿರಳೆ ಪತ್ತೆಯಾಗಿದ್ದು, ಸಾನ್ಯಾ ಅಯ್ಯರ್ ಕಿರುಚಾಡಿದ್ದಾರೆ. ಈ ವೇಳೆ ಉದಯ ಸೂರ್ಯ ಸಹಾಯಕ್ಕೆ ಬಂದಿದ್ದಾರೆ. ಒದ್ದಾಡಿ ಗುದ್ದಾಡಿ ಅದನ್ನು ಹಿಡಿದಿದ್ದಾರೆ ಕೂಡಾ. ಇದೇ ವೇಳೆ ವಾಶ್ ರೂಮ್ ನಲ್ಲಿದ್ದ ರೂಪೇಶ್ ಮೇಲೆ ಜಿರಳೆ ಎಸೆಯುವಂತೆ ಸಾನ್ಯಾ ಸಲಹೆ ಕೊಟ್ಟಿದ್ದಾಳೆ ಸೂರ್ಯ ಆದೇಶ ಪಾಲಿಸಿದ್ದಾರೆ.
ಇದನ್ನು ಓದಿ : Ashwath narayan: ಅಶ್ವಥ್ ನಾರಾಯಣ್ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆದ ಕುಮಾರಸ್ವಾಮಿ
ಇದೇ ಅವಕಾಶ ಬಳಸಿಕೊಂಡ ರೂಪೇಶ್ ಜಿರಳೆ ಹಿಡಿದು ಸಾನ್ಯಾ ಅವರನ್ನು ಕಾಡಿದ್ದಾರೆ.ಈ ವೇಳೆ ಲೋಕೇಶ್ ಕೂಡಾ ಸಾನ್ಯಾ ಸಹಾಯಕ್ಕೆ ಬಂದಿದ್ದಾರೆ. ಆದರೆ ರೂಪೇಶ್ ಅವರನ್ನೂ ಹಿಮ್ಮೆಟ್ಟಿಸಿದ್ದಾರೆ. ಕೊನೆಗೆ ನಾನು ಹೇಳಿದಂತೆ ನೀನು ಕೇಳಬೇಕು ಅನ್ನುವ ಒಪ್ಪಂದೊಂದಿಗೆ ಜಿರಳೆ ಪ್ರಸಂಗ ಮುಕ್ತಾಯ ಕಂಡಿದೆ.
ಈಗಾಗಲೇ ರೂಪೇಶ್ ಜೊತೆಗೆ ಸಾನ್ಯಾ ಫಿಲ್ಮಂ ಮಾಡುವ ಬಗ್ಗೆ ಮಾತುಕತೆ ಕೂಡಾ ನಡೆದಿತ್ತು.
Discussion about this post