ಕಾರಿನ ಬಾನೆಟ್ ( King Cobra Car) ಒಳಗೆ ಹಾವು ಸೇರಿಕೊಳ್ಳದಂತೆ ಮಾಡುವುದು ಹೇಗೆ ಎಂದು ಈಗ ತಲೆ ಕೆಡಿಸಿಕೊಳ್ಳಬೇಕಾಗಿದೆ.
ಕೊಟ್ಟಾಯಂ : ಕಾಳಿಂಗ ಸರ್ಪ ಅದೆಷ್ಟು ಅಪಾಯಕಾರಿ ಅನ್ನುವುದು ಎಲ್ಲರಿಗೂ ಗೊತ್ತಿದೆ. ಸೆಕೆಂಡ್ ಒಳಗಾಗಿ ಅದೆಷ್ಟು ಪ್ರಳಯಾಂತಕಾರಿ ಅನ್ನುವುದು ಕೂಡಾ ಈಗಾಗಲೇ ಸಾಬೀತಾಗಿದೆ. ಈ ನಡುವೆ ಕೇರಳದಿಂದ ಎದೆ ನಡುಗಿಸುವ ಸುದ್ದಿಯೊಂದು ಬಂದಿದೆ. ಅದು ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳು ಕಳೆದ ಸುದ್ದಿ.( King Cobra Car)
ಕೇರಳದ ಕೊಟ್ಟಾಯಂ ಜಿಲ್ಲೆಯ ಅರ್ಪುಕರದ ಸುಜಿತ್ ಮಲ್ಲಪುರಂ ಜಿಲ್ಲೆಯ ನೀಲಂಬುರ್ ಗೆ ಕಾರ್ಯನಿಮಿತ್ತ ಪ್ರಯಾಣ ಬೆಳೆಸಿದ್ದರು. ಈ ಎರಡೂ ಜಾಗದ ನಡುವಿನ ಅಂತರ 237 ಕಿಮೀ. August 2 ರಂದು ನೀಲಂಬುರ್ ನಲ್ಲಿ ತಮ್ಮ Tata Nexon on ಕಾರನ್ನು ಪಾರ್ಕ್ ಮಾಡಿದ ಕೆಲವೇ ಹೊತ್ತಿನಲ್ಲಿ ಕಾಳಿಂಗ ಸರ್ಪವೊಂದು ಕಾರಿನ ಕೆಳ ಭಾಗದಲ್ಲಿ ಬಾನೆಟ್ ಒಳಗೆ ನುಸುಳಿರುವುದನ್ನು ನೋಡಿದ್ದಾರೆ.
ಇದನ್ನೂ ಓದಿ : laxman savadi ಕಾರು ಪಲ್ಟಿ : ಅಪಾಯದಿಂದ ಪಾರಾದ ಮಾಜಿ ಡಿಸಿಎಂ
ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ, ಅಲ್ಲಿನ ಸಿಬ್ಬಂದಿ ಆಗಮಿಸಿ ಬಾನೆಟ್ ತೆರೆದಾಗ ಬ್ಯಾಟರಿ ಪಕ್ಕದಲ್ಲೇ ಕಾಳಿಂಗ ಸರ್ಪವಿತ್ತು. ಇನ್ನೇನು ಹಿಡಿಯೋಣ ಅನ್ನುವಷ್ಟರಲ್ಲಿ ಕಾಳಿಂಗ ಸರ್ಪ ಕಾರಿನ ಇಂಜಿನ್ ಒಳಗೆ ಸೇರಿಕೊಂಡಿದೆ. ಅದೆಷ್ಟು ಪ್ರಯಾಸ ಪಟ್ಟರೂ ಹಿಡಿಯಲಾಗಲಿಲ್ಲ. ಕೊನೆಗೆ ಕಾರು ಸ್ಟಾರ್ಟ್ ಮಾಡಿ ಇಂಜಿನ್ ಬಿಸಿಯಾದ್ರೆ ಹಾವು ಹೊರ ಬಹುದೆಂದು ಆ ಪ್ರಯತ್ನವನ್ನೂ ನಡೆಸಲಾಯ್ತು. ಆದರೆ ಕಾಳಿಂಗ ಜಪ್ಪಯ್ಯ ಅಂದ್ರು ಹೊರ ಬರಲಿಲ್ಲ.
ಕೊನೆಗೆ ಮೂರು ದಿನ ಕಾರನ್ನು ಹಾಗೇ ಬಿಡಿ, ತನ್ನ ಪಾಡಿಗೆ ಹಾವು ಇಳಿದು ಹೋಗಲಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದರು. ಅದೇ ರೀತಿ ಸುಜಿತ್ ತಮ್ಮ ಕಾರನ್ನು ಅಲ್ಲೇ ಬಿಟ್ಟಿದ್ದಾರೆ. ಆಗ್ಲೂ ಹಾವಿನ ಸುಳಿವಿನ. ಆದ್ರೂ ಹಾವು ಎಲ್ಲೋ ಕಾರಿನೊಳಗೆ ಅಡಗಿರಬಹುದು ಅನ್ನುವ ಸಂಶಯ ಸುಜಿತ್ ಅವರದ್ದು, ಹೀಗಾಗಿ ನೀಲಂಬುರ್ ಸಮೀಪದ ಸರ್ವೀಸ್ ಸೆಂಟರ್ ಒಂದಕ್ಕೆ ಕಾರನ್ನು ಒಯ್ದು, ಸರ್ವಿಸ್ ಮಾಡಿಸಿದ್ದಾರೆ. ಹಾವಿದ್ರೆ ಹೊರಗೆ ಬರಲಿ ಎಂದು ಡೀಸೆಲ್ ಹೊಡೆಸಿದ್ದಾರೆ. ಆಗ್ಲೂ ಹಾವಿನ ಪತ್ತೆಯಿಲ್ಲ.
ಸರ್ವೀಸ್ ಸೆಂಟರ್ ನಲ್ಲೂ ಹಾವು ಪತ್ತೆಯಾಗಿಲ್ಲ ಅಂದ್ರೆ ಹಾವು ಖಂಡಿತಾ ಹೋಗಿರುತ್ತದೆ ಅನ್ನುವ ವಿಶ್ವಾಸ ಮೂಡಿದೆ. ಹೀಗಾಗಿ ಕಾರನ್ನು ಅರ್ಪುಕರದ ಮನೆಗೆ ತೆಗೆದುಕೊಂಡಿದ್ದಾರೆ. ಹೋದ ಮೇಲೆ ಅದ್ಯಾಗೋ ಹಾವು ಕಾರಿನೊಳಗೆ ಇರಬಹುದೇ ಅನ್ನುವ ಅನುಮಾನ ಮೂಡಿದೆ. ಹೀಗಾಗಿ ಯಾವುದಕ್ಕೂ ಇರಲಿ ಎಂದು ಕಾರನ್ನು Observationಗೆ ಇಟ್ಟಿದ್ದಾರೆ.
ಒಂದು ವಾರ ಕಳೆಯುವಷ್ಟರಲ್ಲಿ ಕಾರಿನೊಳ ಭಾಗದಿಂದ ಹಾವಿನ ಚರ್ಮವೊಂದು ನೇತಾಡುತ್ತಿರುವುದನ್ನು ಸುಜಿತ್ ಗಮನಿಸಿದ್ದಾರೆ. ಹೀಗಗಿ ಮತ್ತೆ ಉರಗ ರಕ್ಷಕರಿಗೆ ಕರೆ ಮಾಡಿದ್ದಾರೆ. ಅವರು ಬಂದು ನೋಡಿದರೆ ಹಾವಿನ ಪತ್ತೆಯಿಲ್ಲ. ಸರಿ ಸುಮಾರು 20 ದಿನದಿಂದ ಹಾವಿನ ಕಣ್ಣಾಮುಚ್ಚಾಲೆಯಿಂದ ಸುಜಿತ್ ಸುಸ್ತಾಗಿ ಹೋಗಿದ್ದರು.
ಇದಾದ ಒಂದು ವಾರದ ಬಳಿಕ ಸುಜಿತ್ ಮನೆಯ ಸಮೀಪದಲ್ಲೇ ಕಾಳಿಂಗ ಸರ್ಪವೊಂದು ಓಡಾಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ಹಿಡಿದು ಸುರಕ್ಷಿತಕ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಅರಣ್ಯಾಧಿಕಾರಿಗಳ ಪ್ರಕಾರ ಕೊಟ್ಟಾಯಂ ಜಿಲ್ಲೆ ಕಾಳಿಂಗ ಸರ್ಪದ ಆವಾಸ ಸ್ಥಾನವಲ್ಲ. ಮಲ್ಲಪುರಂ ಜಿಲ್ಲೆಯ ಪ್ರದೇಶಗಳಲ್ಲಿ ಕಾಳಿಂಗ ಸರ್ಪ ಸಾಮಾನ್ಯವಾಗಿ ವಾಸಿಸುತ್ತದೆ. ಹೀಗಾಗಿ ಇದು ಸುಜಿತ್ ಕಾರಿನಲ್ಲೇ ಪ್ರಯಾಣಿಸಿದ ಕಾಳಿಂಗ ಸರ್ಪ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
Discussion about this post