ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೊಂದು ಹಿರಿಮೆ ತಂದುಕೊಟ್ಟ ನಟ. ಅದೃಷ್ಟವೇ ಕೈ ಕೊಟ್ಟಿತ್ತು ಎಂದು ತಲೆ ಮೇಲೆ ಕೈ ಹೊತ್ತಿ ಕೂರದ ಹಠಮಾರಿ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ಅದಕ್ಕೆ ಅವರ ಶ್ರಮ ಕಾರಣ. ಹೀಗಾಗಿ ಅವರನ್ನು ಚಿತ್ರರಂಗ ಮಾಣಿಕ್ಯ ಎಂದು ಗುರುತಿಸುತ್ತದೆ.
ಈ ನಡುವೆ ಸುದೀಪ್ ಅವರು ಮಗಳ ಕಾರಣದಿಂದ ಟ್ರೋಲ್ ಆಗುತ್ತಿದ್ದಾರೆ. ಹಿಂದೊಮ್ಮೆ ಕನ್ನಡ ಹೋರಾಟಗಾರರನ್ನು ಕಂಡ್ರೆ ಭಯವಾಗುತ್ತದೆ. ಅದ್ಯಾಕೆ ಭಯ ಅನ್ನುವುದನ್ನು ವಿವರಿಸಿದ್ದರೂ ಕೂಡಾ. ಈಗ ಇದೀ ಕನ್ನಡ ವಿಷಯದಲ್ಲಿ ಸುದೀಪ್ ಹಾಗೂ ಮಗಳು ಸಾನ್ವಿ ಸುದ್ದಿಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣವೊಂದರಲ್ಲಿ ಸುದೀಪ್ ಅವರ ಮಗಳು ಸಾನ್ವಿ, ಆಸ್ಕ್ ಮಿ ಎನಿಥಿಂಗ್ ಪ್ರಶ್ನೆ ಕೇಳಿದ್ದಾಗ, ಒಬ್ಬರು ನಿಮ್ಮ ಮಾತೃಭಾಷೆ ಯಾವುದು..?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸಾನ್ವಿ ಸುದೀಪ್, ಮಲಯಾಳಂ ಎಂದು ಉತ್ತರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಕಿಚ್ಚನ ಮಗಳಿಗೆ ಕನ್ನಡ ಬರೋದಿಲ್ವಾ ಎಂದು ಕೆಲವರು ಕಿಚಾಯಿಸಿದ್ದಾರೆ.
ಬೆಳೆಯಲು ಕನ್ನಡ ನೆಲ, ಬಳಸಲು ಕನ್ನಡ ಭಾಷೆ, ಆದರೆ ಮಾತೃಭಾಷೆ ಯಾವುದು ಅಂದ್ರೆ ಮಲಯಾಳಂ ಅನ್ನುವುದು ನೆಟ್ಟಿಗರ ಆಕ್ರೋಶ. ಹಾಗಂತ ಸಾನ್ವಿ ಹೇಳಿರುವುದರಲ್ಲಿ ತಪ್ಪಿಲ್ಲ. ಮಾತೃಭಾಷೆ ಅನ್ನುವುದು ಹೆಸರೇ ಸೂಚಿಸುವಂತೆ ತಾಯಿ ಭಾಷೆ. ಸಾನ್ವಿ ತಾಯಿ ಅಂದ್ರೆ ಸುದೀಪ್ ಪತ್ನಿ ಕೇರಳದವರು. ಸಹಜವಾಗಿಯೇ ಅವರ ಮಾತೃಭಾಷೆ ಮಲಯಾಳಂ. ಹೀಗಾಗಿ ಸಾನ್ವಿಗೂ ಮಾತೃಭಾಷೆ ಮಲಯಾಳಂ ಆಗಿರುತ್ತದೆ.
ಆದರೆ ಸೆಲೆಬ್ರೆಟಿಗಳಾದ ಸಂದರ್ಭದಲ್ಲಿ ಭಾಷೆ ವಿಚಾರದಲ್ಲಿ ಒಂದಿಷ್ಟು ಸೂಕ್ಷ್ಮವಾಗಿರಬೇಕಾಗುತ್ತದೆ. ಇನ್ನು ಸುದೀಪ್ ಅವರು ಕೂಡಾ ಕನ್ನಡದ ಬಗ್ಗೆ ಅಪಾರ ಅಭಿಮಾನಿ ಪ್ರೀತಿ ಇಟ್ಟುಕೊಂಡ ಮನುಷ್ಯ. ಹೀಗಾಗಿಯೇ ನೆಟ್ಟಿಗರು ಸಹಜವಾಗಿ ಪ್ರಶ್ನೆ ಎತ್ತಿದ್ದಾರೆ.
Discussion about this post