Kejriwal ಆಪ್ ಖಾಲಿ ಡಬ್ಬ ಸದ್ದು ಮಾಡುತ್ತಿದೆ ಅನ್ನುತ್ತಿದೆ ಬಿಜೆಪಿಯವರು ಇದೀಗ ಈ ಭರವಸೆ ಕೇಳಿ ಗಾಬರಿಯಾಗಿದ್ದಾರೆ
ಗುಜರಾತ್ : ಆಪ್ ಅನ್ನು ಅಧಿಕಾರಕ್ಕೆ ತಂದರೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡೋದಾಗಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ( Kejriwal) ಭರವಸೆ ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಛ್ ಜಿಲ್ಲೆಯ ಭುಜ್ನಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಭರವಸೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಗುಜರಾತ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಉಚಿತ ಶಿಕ್ಷಣವನ್ನು ಉಚಿವಾಗಿ ನೀಡುವ ದೊಡ್ಡ ಭರವಸೆಯನ್ನು ನೀಡಿದ್ದಾರೆ.
ಇದನ್ನು ಓದಿ : Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು
ಜೊತೆಗೆ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಉನ್ನತೀಕರಣ ಮಾಡುವುದಾಗಿ ಹೇಳಿರುವ ಕೇಜ್ರಿವಾಲ್ ಖಾಸಗಿ ಶಾಲೆಗಳ ವ್ಯವಹಾರದ ಲೆಕ್ಕಪರಿಶೋಧನೆ ನಡೆಸುವುದಾಗಿ ಹೇಳಿದ್ದಾರೆ. ಜೊತೆಗೆ ಹೆಚ್ಚುವರಿ ಶುಲ್ಕವನ್ನು ಪಡೆದಿದ್ದರೆ ಅದನ್ನು ಪೋಷಕರಿಗೆ ವಾಪಸ್ ಕೊಡಿಸುವ ಕೆಲಸವನ್ನೂ ಗುಜರಾತ್ನಲ್ಲಿ ನಮ್ಮ ಸರ್ಕಾರ ಮಾಡಲಿದೆ ಅಂದಿದ್ದಾರೆ.
Discussion about this post