ಮದುವೆ ಕುರಿತಂತೆ ದುನಿಯಾ ವಿಜಿಯ ವಿಷಯದಲ್ಲಿ ಈ ಹಿಂದೆ ಕೇಳಿ ಬಂದ ಆರೋಪಗಳು ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ.
ಜೈಲಿನಿಂದ ಹೊರ ಬಂದ ಬೆನ್ನಲ್ಲೇ ನಾಗರತ್ನ ವಿರುದ್ಧ ಆರೋಪ ಮಾಡಿದ್ದ ದುನಿಯಾ ವಿಜಿ, ನಾನು ಅವಳಿಗೆ ಮನೆ ಬಿಟ್ಟು ಕೊಟ್ಟಿದ್ದೇನೆ. ಮಕ್ಕಳಿಗೆ ಆಸ್ತಿ ಬರೆದು ಕೊಟ್ಟಿದ್ದೇನೆ ಎಂದಿದ್ದರು.
ಇದನ್ನೂ ಓದಿ : ಅಪ್ಪನಿಗೆ ಹುಟ್ಟಿದ್ದೀನಿ..ಕೀರ್ತಿಯನ್ನು ನನ್ನಿಂದ ಬೇರೆ ಮಾಡಲು ಸಾಧ್ಯವಿಲ್ಲ
ಇದಕ್ಕೆ ತಿರುಗೇಟು ಕೊಟ್ಟಿರುವ ನಾಗರತ್ನ, ವಿಜಿಗೆ ಕೀರ್ತಿ ಗೌಡ ಎರಡನೇ ಪತ್ನಿ ಅಲ್ಲ. ಐದನೇ ಪತ್ನಿ ಎಂದು ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
ಚಿನ್ನದ ಮೊಟ್ಟೆ ಇಡೋ ಕೋಳಿ ನೋಡ್ಕೊಂಡು ನಾನು ಬಂದಿಲ್ಲ. ಅದನ್ನು ನೋಡಿ ಬಂದವರು ಇನ್ನೊಬ್ಬರು. ನನಗೆ ಆ ಮಾತನ್ನು ಹೇಳುವುದು ಬೇಡ. ನಾನು ಮದುವೆಯಾಗಿ ಬರುವಾಗ ವಿಜಯ್ ದುನಿಯಾ ವಿಜಯ್ ಆಗಿರಲಿಲ್ಲ. ಅವರೇನು ಆಗಿರಲಿಲ್ಲ. ಆಗ ನಾವು ಪಟ್ಟ ಕಷ್ಟ ಎಂದು ನನಗೆ ಗೊತ್ತಿದೆ.
ಇದನ್ನೂ ಓದಿ : ಹೀರೋ ಆಗಿರುವ ನೀವು ರೋಲ್ ಮಾಡೆಲ್ ಆಗಿರಬೇಕು : ವಿಜಿಗೆ ನೀತಿ ಪಾಠ ಹೇಳಿದ ಜಡ್ಜ್
ಈಗ ತಂದೆ, ತಾಯಿ ಹೆಸರಿನಲ್ಲಿ ವಿಜಯ್ ಅನುಕಂಪ ಗಿಟ್ಟಿಸುತ್ತಿದ್ದಾರೆ. ನನ್ನ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ವರ್ಷಕ್ಕೆ ಒಂದೊಂದು ಮದುವೆಯಾಗೋದು ಯಾವ ನ್ಯಾಯ ಹೇಳಿ ಎಂದು ವಾಗ್ದಾಳಿ ನಡೆಸಿದರು.
ದುನಿಯಾ ವಿಜಯ್ ಕೀರ್ತಿ ಗೌಡ ಅವರನ್ನು ಮದುವೆಯೇ ಆಗಿಲ್ಲ ಎಂದ ನಾಗರತ್ನ, ದುನಿಯಾ ವಿಜಯ್ ಗೆ ಈ ರೀತಿಯ ಸಂಬಂಧಗಳು ಹೊಸದಲ್ಲ. ನನ್ನ ಮದುವೆಗೂ ಮುಂಚೆಯೇ ಅವರಿಗೆ ಇನ್ನೊಂದು ಮದುವೆಯಾಗಿತ್ತು. ಅದು ಡೈವೋರ್ಸ್ ಆಗಿದೆಯತೆ. ನಂತರ ಶುಭ ಪೂಂಜಾ ಬಂದರು, ಬಳಿಕ ಜಯಮ್ಮನ ಮಗ ಸಿನಿಮಾದ ಹೀರೋಯಿನ್ ಭಾರತಿ. ಈಗ ಕೀರ್ತಿ ಗೌಡ. ಹೀಗೆ ವರ್ಷಕ್ಕೆ ಒಂದೊಂದು ಮದುವೆ ಆಗೋದು ವಿಜಿಗೆ ಕರಗತವಾಗಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ಯಾರಿವನು ಪಾನಿಪೂರಿ ಕಿಟ್ಟಿ – ಬಾಡಿ ಬಿಲ್ಡರ್ ಗ್ಯಾಕೆ ಈ ಹೆಸರು…..
ನಾನು ವಿಜಯ್ ಜೊತೆ ಸಂಸಾರ ಮಾಡಲು ಬಂದವಳು.ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ನೀಡಲ್ಲ ಎಂದಿರುವ ನಾಗರತ್ನ, 2009ರಲ್ಲಿ ದುನಿಯಾ ಋಣ ಎಂಬ ಹೆಸರಿನ ಮನೆಯನ್ನು ನನ್ನ ಹೆಸರಿಗೆ ಬರೆದಿದ್ದರು. ಅವರ ಮಕ್ಕಳಿಗೆ ಅವರು ಆಸ್ತಿ ಬರೆದಿರುವುದರಲ್ಲಿ ವಿಶೇಷ ಏನಿದೆ? ಹಲವು ಕಡೆ ದುನಿಯಾ ವಿಜಯ್ ಗೆ ಸಂಬಂಧಿಸಿದ ಮನೆಗಳಿವೆ. ಅವುಗಳೆಲ್ಲ. ಏನಾಯ್ತು. ಯಾರ ಅನುಕಂಪ ಗಿಟ್ಟಿಸಲು ಅವರು ಬಾಡಿಗೆ ಮನೆಯಲ್ಲಿದ್ದಾರೆ ಎಂದು ಪ್ರಶ್ನಿಸಿದರು.
[youtube https://www.youtube.com/watch?v=f7cenEeBUzQ&w=697&h=392]
Discussion about this post